ಪ್ರಮುಖ ಸೋಷಿಯಲ್ ಮೀಡಿಯಾ ಭಾರತ ಮೂಲದ ಶೇರ್ಚ್ಯಾಟ್ನಲ್ಲಿ ಗೂಗಲ್, ಪ್ರಮುಖ ಮಾಧ್ಯಮ ಸಂಸ್ಥೆ ಟೈಮ್ಸ್ ಗ್ರೂಪ್ ಮತ್ತು ಸಿಂಗಾಪುರದ ಟೆಮಸೆಕ್ ಹೋಲ್ಡಿಂಗ್ಸ್ 2,325 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.
ಈ ಮೂಲಕ ಕಂಪನಿಯ ಮೌಲ್ಯ 5 ಶತಕೋಟಿ ಡಾಲರ್ಗೆ ವರ್ಧಿಸಿದೆ.
2015ರಲ್ಲಿ ಅಂಕುಶ್ ಸಚ್ದೇವ್, ಭಾನು ಪ್ರತಾಪ್ ಸಿಂಗ್ ಮತ್ತು ಫರೀದ್ ಅಹ್ಸಾನ್ ಶೇರ್ ಚ್ಯಾಟ್ನ್ನು ಆರಂಭಿಸಿದ್ದರು.
15 ಭಾಷೆಗಳಲ್ಲಿರುವ ಶೇರ್ ಚ್ಯಾಟ್ ಭಾರತದಲ್ಲಿ 25 ಕೋಟಿ ಬಳಕೆದಾರರನ್ನು ಹೊಂದಿದೆ. 2020ರಲ್ಲಿ ತನ್ನದೇ ಮೋಜ್ ಆಪ್ನ್ನು ಆರಂಭಿಸಿತ್ತು.