ರಾಷ್ಟçಕವಿ ಕುವೆಂಪು ಅವರಿಗೆ ಅವಮಾನ ಮತ್ತು ನಾಡಗೀತೆಯನ್ನು ತಿರುಚಿ ಬರೆದಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಷ್ಟçಕವಿ ಕುವೆಂಪು ಪ್ರತಿಷ್ಠಾನಕ್ಕೆ ತಾವು ನೀಡಿದ್ದ ರಾಜೀನಾಮೆ ಕುಚೋದ್ಯ ಮತ್ತು ಕುಹುಕ ಮಾಡುತ್ತಿರುವವರಿಗೆ ಬಗ್ಗೆ ಹಿರಿಯ ಸಂಶೋಧಕ ಹಂಪನಾ ಅವರು ಉತ್ತರ ನೀಡಿದ್ದಾರೆ.
ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಬAಧವಾಗಿ ಫೋನು ಮೂಲಕ ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ. ಅದೇ ಪ್ರಶ್ನೆಗಳಿಗೆ ಮತ್ತೆ ಮತ್ತೆ ಫೋನಿನಲ್ಲಿ ಉತ್ತರಿಸುವ ಬದಲು ನನ್ನ ವಿವರಣೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದೇನೆ.
ಪಠ್ಯಪುಸ್ತಕ ಸಂಬAಧವಾಗಿ ನಾನು ಖಚಿತವಾಗಿ ಟೀಕಿಸದಿರುವುದಕ್ಕೆ ಕಾರಣವಿದೆ. ನಾನು ಆ ಪುಸ್ತಕಗಳನ್ನು ಓದಿಲ್ಲ. ಆಮೂಲಾಗ್ರವಾಗಿ ನೋಡದೆ ನಾನು ಪಠ್ಯಪುಸ್ತಕಗಳ ಚರ್ಚೆಗೆ ಇಳಿಯಲಿಲ್ಲ. ಅದನ್ನು ಓದಿನೋಡಿರುವವರು ತಮ್ಮ ಅಭಿಪ್ರಾಯ-ಆಕ್ಷೇಪಗಳನ್ನು ತಿಳಿಸುತ್ತಿದ್ದಾರೆ.
ಕುವೆಂಪು ಮತ್ತು ನಾಡಗೀತೆ ವಿಚಾರವಾಗಿ ನನ್ನ ನಿಲುವನ್ನು ಅನೇಕರು ಸಮರ್ಥಿಸಿದ್ದಾರೆ. ಇನ್ನು ಕೆಲವರು ರೋಹಿತ್ ಚಕ್ರತೀರ್ಥರನ್ನು ಬೆಂಬಲಿಸಿ ವಿವರಣೆಯಿತ್ತು, ಇದೊಂದು ಅಣಕವಾಡೆಂದೂ, ನಾನು ರಾಜೀನಾಮೆ ನೀಡಿರುವುದು ಸರಿಯಲ್ಲವೆಂದೂ ವಾದಿಸಿದ್ದಾರೆ. ಅವರು ಕೊಡುವ ಮೂರು ಸಮರ್ಥನೆಗಳು:
1. ಕುವೆಂಪುನಿAದನೆಯ ಸಾಲುಗಳನ್ನು ರೋಹಿತರು ಬರೆದದ್ದಲ್ಲ.
2. ಬೇರೆ ಯಾರೋ ಬರೆದದ್ದು.
3. ತಮಗೆ ಜಾಲತಾಣದಲ್ಲಿ ಬಂದುದನ್ನು ಫಾರ್ವರ್ಡ್ ಮಾಡಿದಾರೆ ಅಷ್ಟೆ. (ಇತ್ಯಾದಿ).
ಇದಕ್ಕೆ ನನ್ನ ಮರುಪ್ರಶ್ನೆಗಳು:
1. ಹಾಗಾದರೆ ನಿಂದನೆಯ ಒಕ್ಕಣೆ ಬರೆದವರು ಯಾರು.
2. ಜಾಲತಾಣದಲ್ಲಿ ಯಾರಿಂದ ನಿಮಗೆ ಬಂತೆAಬುದನ್ನು ಮೊದಲು ಸ್ಪಷ್ಟಪಡಿಸಿ ಮತ್ತು ನಿಮಗೊಬ್ಬರಿಗೆ ಮಾತ್ರ ಹೇಗೆ ಬಂತು. ಎಷ್ಟನೆಯ ತಾರೀಕು, ಎಷ್ಟು ಹೊತ್ತಿಗೆ ನಿಮಗೆ ಬಂತು.
3. ನಿಮಗೆ ಕಳಿಸಿದವರನ್ನು ಇದು ತಪ್ಪು ಎಂದು ಕೇಳಲಿಲ್ಲವೇಕೆ.
4. ನೀವು ಬೇರೆ ಯಾರ್ಯಾರಿಗೆ ಫಾರ್ವರ್ಡ್ ಮಾಡಿದಿರಿ.
5. ಜಾಲತಾಣದಲ್ಲಿ ಇಂಥ ಕೆಟ್ಟ ಒಕ್ಕಣೆ ಬಂದಾಗ ಒಬ್ಬ ಲೇಖಕರಾಗಿ ಯಾಕೆ ತೆಪ್ಪಗಿದ್ದಿರಿ. ಇದು ಅಣಕವಾಡಲ್ಲ, ಕೊಳಕು ಬುದ್ಧಿಯ ಗೇಲಿಮಾತುಗಳು. ವಾಸ್ತವವಾಗಿ ಇದು ಫಾರ್ವರ್ಡ್ ಮೆಸೇಜೆಂದು ನಂಬಲು ಸರಿಯಾದ ಕುರುಹುಗಳಿಲ್ಲ. ಬಂದಿರುವ ಆರೋಪದಿಂದ ಪಾರಾಗಲು ಉಪಾಯಗಳನ್ನು ಹುಡುಕಿ ’ವಾಟ್ಸಪ್ಪಲ್ಲಿ ಬಂದಿದೆ’ ಎಂದು ಹೊಸದಾಗಿ ಸೇರಿಸಿದಂತಿದೆ. ಸುಳ್ಳನ್ನು ಸಾಧಿಸುವ ಬದಲು ತಪ್ಪು ಒಪ್ಪಿಕೊಂಡು ಕ್ಷಮೆಕೇಳುವುದು ಮೇಲು.
ನಾನು ಹಠವಾದಿಯೇನಲ್ಲ. ನನ್ನದು ತಪ್ಪುಗ್ರಹಿಕೆಯೆಂದು ತೋರಿಸಿಕೊಟ್ಟರೆ ಸಂತೋಷದಿAದ ಒಪ್ಪಿ ತಿದ್ದಿಕೊಳ್ಳುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿರುವುದನ್ನು ಸ್ವಾಗತಿಸುತ್ತೇನೆ.
-ಹಂಪನಾ
ಜೂನ್ 1, 2022