ವಡೋದರಾದ 24 ವರ್ಷದ ಯುವತಿಯೊಬ್ಬರು ತನ್ನನ್ನು ತಾನೇ ಮದುವೆಯಾಗಲು ಮುಂದಾಗಿದ್ದಾರೆ. ಜೂನ್ 11ರಂದು ಈ ವಿಚಿತ್ರ ಮತ್ತು ಅದ್ಧೂರಿ ಮದುವೆ ನಿಗದಿಯಾಗಿದೆ. ಸಾಮಾನ್ಯ ಮದುವೆಗಳಲ್ಲಿ ಯಾವೆಲ್ಲಾ ಆಚರಣೆ, ಸಂಪ್ರದಾಯ ಪಾಲಿಸಲಾಗುತ್ತದೆಯೋ ಅದೆಲ್ಲವೂ ಇಲ್ಲಿ ಇರಲಿದೆ. ಸಪ್ತಪದಿ, ಸಿಂಧೂರ.. ಹೀಗೆ ಎಲ್ಲವೂ ಇರಲಿದೆ.. ಮಂತ್ರಘೋಷಗಳು ಮೊಳಗಲಿವೆ. ಇಲ್ಲಿ ವರ ಮಾತ್ರ ಇರುವುದಿಲ್ಲ. ಇದು ದೇಶದ ಮೊಟ್ಟ ಮೊದಲ ಸ್ವಯಂ ವಿವಾಹ ಎನ್ನುವುದು ಗಮನಾರ್ಹ ವಿಚಾರ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಕ್ಷಮಾ ಬಿಂದು ಅವರೇ ಈ ಸಾಹಸೋಪೇತ ನಿರ್ಣಯ ಕೈಗೊಳ್ಳುತ್ತಿರುವ ಯುವತಿ. ತನ್ನನ್ನು ತಾನೇ ಮದುವೆ ಆಗುತ್ತಿರುವ ಕ್ಷಮಾ ಬಿಂದು ಗೋವಾದಲ್ಲಿ ಹನಿಮೂನ್ಗೂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನುವುದು ಇಂಟ್ರೆಸ್ಟಿಂಗ್ ಮಾಹಿತಿ .
ನನಗೆ ಸಾಂಸಾರಿಕ ಬಂಧ ಇಷ್ಟವಿಲ್ಲ. ಆದ್ರೆ ವಧು ಆಗಬೇಕೆಂಬ ಇಷ್ಟ ಇದೆ.. ಹೀಗಾಗಿ ನನ್ನನ್ನು ನಾನೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದೆ. ಇದಕ್ಕೆ ಪೋಷಕರು ಸಂತೋಷದಿಂದ ಒಪ್ಪಿದ್ದಾರೆ. ದೇಶದಲ್ಲಿ ಇಂತಹ ಮದ್ವೆ ನಡೆದಿದ್ಯಾ ಎಂದು ಪರಿಶೀಲಿಸಿದೆ.. ಎಲ್ಲಿಯೂ ಕಾಣಲಿಲ್ಲ.. ಬಹುಶ ನನ್ನದೇ ಮೊದಲ ಮದುವೆ ಇರಬೇಕು.. ಈ ಸ್ವಯಂ ಮದ್ವೆಯನ್ನು ಕೆಲವರು ಟೀಕಿಸಬಹುದು. ಆದ್ರೆ, ಮಹಿಳೆಯರು ಮುಖ್ಯವೇ ಎಂಬುದನ್ನು ಸಾರಿ ಹೇಳಲು ಈ ಮೂಲಕ ಪ್ರಯತ್ನಿಸುತ್ತಿದ್ದೇನೆ ಎಂದು ಕ್ಷಮಾ ತಿಳಿಸಿದ್ದಾರೆ.
ಕ್ಷಮಾ ಬಿಂದು ಅವರದ್ದು ವೆಲ್ ಸೇಟೇಲ್ಡ್ ಫ್ಯಾಮಿಲಿ.. ತಂದೆ-ತಾಯಿ ಇಬ್ಬರು ಕೂಡಾ ಎಂಜಿನಿಯರ್.. ತಂದೆ ಆಫ್ರಿಕಾದಲ್ಲಿದ್ದಾರೆ.. ತಾಯಿ ಅಹ್ಮದಾಬಾದ್ನಲ್ಲಿ ನೆಲೆಸಿದ್ದಾರೆ. ಕ್ಷಮಾ ಬಿಂದು ವಡೋದರದಾ ಖಾಸಗಿ ಕಂಪನಿಯಲ್ಲಿ HR ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕ್ಷಮಾ ಮೊದಲು ಅಪ್ಪ ಅಮ್ಮನ ಮುಂದೆ ಈ ಪ್ರಪೋಸಲ್ ಇಟ್ಟಾಗ, ಅವರು ಶಾಕ್ ಆಗಿದ್ದರು. ನಿಧಾನಕ್ಕೆ ಅರ್ಥ ಮಾಡಿಸಿದಾಗ ಒಪ್ಪಿಕೊಂಡರು. ಆದರೇ, ಅನಿವಾರ್ಯ ಕಾರಣಗಳಿಂದ ತಂದೆ ತಾಯಿ ಇಬ್ಬರು ಮಗಳ ಮದುವೆಯಲ್ಲಿ ನೇರವಾಗಿ ಭಾಗಿ ಆಗುತ್ತಿಲ್ಲ. ಹೀಗಾಗಿ ಕ್ಷಮಾ ಬಿಂದು ಗೆಳೆತಿಯರ ಸಮ್ಮುಖದಲ್ಲಿ ಸ್ವಯಂ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಕ್ಷಮಾ ಬಿಂದು ಪೋಷಕರು ವಿಡಿಯೋ ಕಾಲ್ ಮೂಲಕ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.