ಗುಜರಾತ್ ಚುನಾವಣೆ ಸನಿಹದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರದ ಸನ್ನಿವೇಶ ಎದುರಾಗಿದೆ. ಕೇಂದ್ರದ ಮಾಜಿ ಮಂತ್ರಿ, ಗುಜರಾತ್ ಕಾಂಗ್ರೆಸ್ ನ ಹಿರಿಯ ಮತ್ತು ಪ್ರಭಾವಿ ನಾಯಕ ಭರತ್ ಸಿಂಗ್ ಸೋಲಂಕಿ ಪರ ನಾರಿ ಜೊತೆ ಲಾಡ್ಜ್ ನಲ್ಲಿ ಇರುವಾಗ ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಎರಡು ಬಾರಿ ಗುಜರಾತ್ ಕಾಂಗ್ರೆಸ್ ಘಟಕದ ಅಧ್ಯಕ್ಷರು ಸಹ ಆಗಿದ್ದ ಭರತ್ ಸಿಂಗ್ ಸೋಲಂಕಿ ಆನಂದ್ ನಗರದ ಹೋಟೆಲ್ ರೂಮ್ ಒಂದರಲ್ಲಿ ಬೇರೊಬ್ಬ ಮಹಿಳೆ ಜೊತೆ ಇದ್ದಾಗ ಪತ್ನಿ ಕೈಯಲ್ಲಿ ಬುಕ್ ಆಗಿ ತೀವ್ರ ಮುಜುಗರ ಅನುಭವಿಸಿದ್ದಾರೆ.
ಪತಿ ಭರತ್ ಸಿಂಗ್ ಸೋಲಂಕಿ ಇದ್ದ ಕೊಠಡಿಗೆ ನುಗ್ಗಿದ ರೇಷ್ಮಾ ಪಟೇಲ್, ಮತ್ತೊಬ್ಬ ಮಹಿಳೆ ಯ ಜುಟ್ಟು ಹಿಡಿದು ದಾಳಿ ನಡೆಸಿದ್ದಾರೆ. ರೂಮ್ ಎಲ್ಲಾ ಅಟ್ಟಾಡಿಸಿ ಹೊಡೆದಿದ್ದಾರೆ. ಪತ್ನಿಯ ಸಡೆನ್ ಎಂಟ್ರಿ ಮತ್ತು ರೌದ್ರಾವತಾರ ಕಂಡು ಭರತ್ ಸಿಂಗ್ ಸೋಲಂಕಿ ಶಾಕ್ ಆಗಿದ್ದಾರೆ. ಪತ್ನಿಯನ್ನು ತಡೆಯಲು ಯತ್ನಿಸಿದರೂ ಪ್ರಯೋಜನ ಆಗಿಲ್ಲ.
ಕಾಂಗ್ರೆಸ್ ನ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ ಪರಸಂಗ ಪುರಾಣದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಭರತ್ ಸಿಂಗ್ ಸೋಲಂಕಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಈ ಮೊದಲು ಸಹ ಕೇಳಿ ಬಂದಿತ್ತು.