ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನೆ ಆಯಿತು.
ಅತಿಥಿಯಾಗಿ ಆಗಮಿಸಿದ ಧರ್ಮಸ್ಥಳ ಠಾಣಾ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಕೃಷ್ಣಕಾಂತ್ .ಎ.ಪಾಟೀಲ್ ಅವರು ದೀಪ ಪ್ರಜ್ವಾಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಶಾಲಾ ಮಂತ್ರಿಗಳಿಗೆ ಪ್ರಮಾಣವಚನ ಬೋಧನೆ ಮಾಡಿದರು.
ಶಾಲಾ ನಾಯಕಿಯಾಗಿ ಪ್ರಾಂಜಲಿ, ಉಪನಾಯಕನಾಗಿ ಜಸ್ವಿನ್, ಸಾಂಸ್ಕ್ರತಿಕ ಮಂತ್ರಿಯಾಗಿ ಅನ್ವಿತಾ, ಕ್ರೀಡಾ ಮಂತ್ರಿಯಾಗಿ ಅನಿಕಾ, ನೀರಾವರಿ ಮಂತ್ರಿಯಾಗಿ ಶೀತಲ್, ಆರೋಗ್ಯ ಮಂತ್ರಿಯಾಗಿ ನಿಶಾಂತ್, ಶಿಕ್ಷಣ ಮಂತ್ರಿಯಾಗಿ ರೇವಂತ್ ಪ್ರಮಾಣವಚನ ಸ್ವೀಕಾರ ಮಾಡಿದರು.
`ಶಾಲಾ ಸಂಸತ್ತು ಒಂದು ಮಾದರಿ ಸಂಸತ್ತು. ಅವರವರ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಇದು ವಿದ್ಯಾರ್ಥಿಗಳಲ್ಲಿ ಹುದುಗಿರುವ ನಾಯಕತ್ವ ಗುಣವನ್ನು ಜಾಗೃತಗೊಳಿಸುತ್ತದೆ. ಒಂದು ಕಾರ್ಯಕ್ರಮ ಯಶಸ್ಸು ಆಗುವುದು ಕೆಲಸಗಳು ವಿಂಗಡನೆಯಾಗಿ ಅದನ್ನು ಸರಿಯಾಗಿ ನಡೆಸಿಕೊಟ್ಟಾಗ ಮಾತ್ರ. ಒಬ್ಬರಿಂದ ಮಾತ್ರ ಅದನ್ನು ಸಾಧ್ಯ ಇಲ್ಲ. ಸಮಯವನ್ನು ಸರಿಯಾಗಿ ನಿಭಾಯಿಸಲು ಕಲಿಯಬೇಕು. ನಾಯಕನಾದವನು ತಾನು ಮಾತ್ರ ಬೆಳೆಯುವುದಲ್ಲ ಎಲ್ಲರನ್ನೂ ಬೆಳೆಸಬೇಕು. ಅದು ನಿಜವಾದ ನಾಯಕತ್ವ. ಶಾಲೆಯ ಗೌರವ ನಿಮ್ಮ ಕೈಯಲ್ಲಿದೆ’
ಎಂದು ನುಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಅವರು ಶಾಲಾ ಮಂತ್ರಿಮAಡಲದ ಜವಾಬ್ದಾರಿಗಳನ್ನು ವಿವರಿಸಿದರು.
ಶಾಲಾ ನಾಯಕಿ ಕುಮಾರಿ ಪ್ರಾಂಜಲಿ ಮಾತನಾಡುತ್ತಾ,
ಶಾಲೆಯಲ್ಲಿ ಶಿಕ್ಷಕರು ವಹಿಸಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತೇವೆ.ಎಲ್ಲರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುತ್ತೇವೆ.ಹಾಗೂ ಅತ್ಯಂತ ಚುರುಕಾಗಿ ನಮ್ಮ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತೇವೆ
ಎಂದು ಭರವಸೆ ನೀಡಿದರು.
ಕುಮಾರಿ ಚರುಷ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಕುಮಾರಿ ರುಕ್ಷಾಲಿ ಸ್ವಾಗತಿಸಿ ಮಾಸ್ಟರ್ ಸಮರ್ಥ ವಂದಿಸಿದರು. ಶಿಕ್ಷಕಿ ಶ್ರೀಮತಿ ಸನ್ಮತಿ ಅತಿಥಿಗಳ ಕಿರು ಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ಲೋಕೇಶ್ ಸಹಾಯಕ ಪೋಲೀಸ್ ಸಿಬ್ಬಂದಿ, ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.