ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡಿದೆ.
ಇಂದು ರೆಪೋ ದರವನ್ನು ಶೇ 0.50 ರಷ್ಟು ಹೆಚ್ಚಿಸುತ್ತಿರುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದಾರೆ. ಆ ಮೂಲಕ ಪರಿಷ್ಕೃತ ರೆಪೊ ದರ ಈಗ ಶೇ 4.90 ಆಗಿದೆ.
ರೆಪೋದರ ಹೆಚ್ಚಳದಿಂದ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕೃಷಿ ಸಾಲ ಸೇರಿದಂತೆ ಎಲ್ಲಾ ರೀತಿ ಸಾಲಗು ಹಾಗೂ ಕ್ರೆಡಿಕ್ ಕಾರ್ಡ್ ಇಎಂಐಗಳು ಹೆಚ್ಚಳವಾಗಿವೆ. ರೆಪೋ ದರ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಐಡಿಎಫ್ಸಿ ಬ್ಯಾಂಕ್ ಹಾಗೂ ಹೆಚ್ಡಿಎಫ್ಸಿ ಬ್ಯಾಂಕ್ಗಲು ಬಡ್ಡಿದರ ಹೆಚ್ಚಳ ಮಾಡಿದ್ದವು.
ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಹಣದುಬ್ಬರ ಪ್ರಮಾಣ ಶೇ 6ರ ಮೇಲಿರಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಹಣದುಬ್ಬರ ನಿಯಂತ್ರಣಕ್ಕಾಗಿ ಆರ್ಬಿಐ ಮೇ 4 ರಂದು ರೆಪೊ ದರವನ್ನು ಶೇ 0.40 ರಷ್ಟು ಹೆಚ್ಚಿಸಿತ್ತು. ರೆಪೊ ದರ ಹೆಚ್ಚಿಸುವ ಬಗ್ಗೆ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಆರು ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ.
23 ನೇ ಹಣಕಾಸು ವರ್ಷದ ಹಣದುಬ್ಬರ ಪ್ರಮಾಣ ಶೇ 5.7ರಷ್ಟು ಇರಬಹುದು ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ ಅದು ಶೇ 6.7ರಷ್ಟು ಇರಲಿದೆ ಎಂದು ಆರ್ಬಿಐ ಹಣಕಾಸು ನೀತಿಯಲ್ಲಿ ಉಲ್ಲೇಖಿಸಲಾಗಿದೆ.