ದೇಶದಲ್ಲಿರುವ 43 ಪ್ರಾದೇಶಿಕ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗಳಲ್ಲಿ ಖಾಲಿ ಇರುವ ವಿವಿಧ 8,106 ಹುದ್ದೆಗಳಲ್ಲಿ ಪರೀಕ್ಷೆಗಾಗಿ ಐಬಿಪಿಎಸ್ (ಬ್ಯಾಂಕಿಂಗ್ ಸಿಬ್ಬಂದಿಗಳ ಆಯ್ಕೆ ಸಂಸ್ಥೆ) ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಕೆ ಜೂನ್ 7ರಿಂದ ಆರಂಭ ಆಗಿದ್ದು, ಜೂನ್ 27ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನ.
ಅರ್ಜಿ ಶುಲ್ಕ: ಎಸ್ ಸಿ/ ಎಸ್ಟಿ/ವಿಕಲಚೇತನ – 175 ರೂಪಾಯಿ, ಇತರರಿಗೆ: 875 ರೂಪಾಯಿ.
ಜುಲೈ 18ರಿಂದ ಜುಲೈ ಜುಲೈ 23ರವರೆಗೆ ಪರೀಕ್ಷೆಗೂ ಮೊದಲು ಪೂರ್ವಭಾವಿ ತರಬೇತಿ ನೀಡಲಾಗುತ್ತದೆ.
ಆಗಸ್ಟ್ ತಿಂಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪ್ರಾಥಮಿಕ ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ನಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಪ್ರೊಬೆಷೇನರಿ ಅಧಿಕಾರಿಗಳ ಹುದ್ದೆಗೆ ಸೆಪ್ಟೆಂಬರ್ನಲ್ಲಿ, ಕ್ಲರ್ಕ್ ಹುದ್ದೆಗೆ ಅಕ್ಟೋಬರ್ನಲ್ಲಿ ಆರ್ ಆರ್ ಬಿ ಅಧಿಕಾರಿ 3 ಮತ್ತು 2ನೇ ದರ್ಜೆ ಹುದ್ದೆಗೆ ಮುಖ್ಯ ಪರೀಕ್ಷೆ ನಡೆಯಲಿದೆ.
ಐಬಿಪಿಎಸ್ ಪರೀಕ್ಷೆ ನಡೆಸುವ ಬ್ಯಾಂಕ್ಗಳ ಪೈಕಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೂಡಾ ಸೇರಿದೆ.
ಒಟ್ಟು ಖಾಲಿ ಇರುವ ಹುದ್ದೆಗಳ ವಿವರ:
ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಖಾಲಿ ಇರುವ (832) ಹುದ್ದೆಗಳ ವಿವರ:
ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಇದೆ: