ಪ್ರವಾದಿ ಮಹಮ್ಮದರ ಬಗ್ಗೆ ಬಿಜೆಪಿ ರಾಷ್ಟಿçÃಯ ವಕ್ತಾರೆ ಆಗಿದ್ದ ನೂಪುರು ಶರ್ಮಾ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಉತ್ತರಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಉತ್ತರಪ್ರದೇಶದ ಸಹರನ್ಪುರ್, ಪ್ರಯಾಗ್ರಾಜ್ ಮತ್ತು ಮೊರದಾಬಾದ್ನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಪ್ರಯಾಗರಾಜ್ನಲ್ಲಿ ಕಲ್ಲು ತೂರಾಟ ನಡೆಸಿರುವ ಘಟನೆಗಳು ನಡೆದಿವೆ. ಕಳೆದ ಬಾರಿ ಕಾನ್ಪುರದಲ್ಲೂ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 40 ಮಂದಿ ಸಾವನ್ನಪ್ಪಿದ್ದರು.
ನೂಪುರು ಶರ್ಮಾ ಬಂಧನಕ್ಕೆ ಆಗ್ರಹಿಸಿ ದೆಹಲಿಯಲ್ಲಿರುವ ದೇಶದ ಅತೀ ದೊಡ್ಡ ಮಸೀದಿ ಜಾಮೀಯಾ ಮಸೀದಿ ಮತ್ತು ಕೋಲ್ಕತ್ತಾದಲ್ಲೂ ಪ್ರತಿಭಟನೆ ನಡೆದಿದೆ. ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾರೆ.