ರಾಜ್ಯಸಭಾ ಚುನಾವಣೆಯಲ್ಲಿ ಮಹಾರಾಷ್ಟçದಲ್ಲಿ ಮಹಾಮೈತ್ರಿಕೂಟ ಮುಖಭಂಗ ಅನುಭವಿಸಿದೆ. ಆರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಂಜಯ್ ಪವಾರ್ ಅವರಿಗೆ ಸೋಲಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಂಸದ ಧನಂಜಯ್ ಮಹಾದಿಕ್ ಗೆದ್ದಿದ್ದಾರೆ.
ಖಾಲಿ ಇದ್ದ ಆರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಮೂರು ಮತ್ತು ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದು ಸಮಬಲ ಸಾಧಿಸಿವೆ. ಈ ಮೂಲಕ ಮಹಾರಾಷ್ಟç ಸಿಎಂ ಉದ್ಧವ್ ಠಾಕ್ರೆ ಬಣಕ್ಕೆ ಸೋಲಾಗಿದೆ.
ಬಿಜೆಪಿಯಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಮಾಜಿ ಸಚಿವ ಅನಿಲ್ ಬಾಂಡೆ, ಶಿವಸೇನೆಯಿಂದ ಹಾಲಿ ಸಂಸದ ಸಂಜಯ್ ರಾವತ್, ಎನ್ಸಿಪಿಯಿಂದ ಪ್ರಫುಲ್ ಪಟೇಲ್ ಮತ್ತು ಕಾಂಗ್ರೆಸ್ನಿAದ ಉತ್ತರಪ್ರದೇಶ ಮೂಲದ ಇಮ್ರಾನ್ ಪ್ರತಾಪ್ಘರ್ಹಿ ಆಯ್ಕೆ ಆಗಿದ್ದಾರೆ.
ಎರಡನೇ ಪ್ರಾಶಸ್ತö್ಯದ ಮತ ಎಣಿಕೆ ವೇಳೆ ಸಂಜಯ್ ಪವಾರ್ ಅವರಿಗಿಂತ ಬಿಜೆಪಿಯ ಧನಂಜಯ್ ಅವರು ಹೆಚ್ಚು ಮತಗಳನ್ನು ಪಡೆಯುವ ಮೂಲಕ ಮಹಾಮೈತ್ರಿಕೂಟಕ್ಕೆ ಆಘಾತ ನೀಡಿದರು. ಎರಡನೇ ಪ್ರಾಶಸ್ತö್ಯದ ಮತ ಎಣಿಕೆ ಮುಕ್ತಾಯದ ವೇಳೆ ಮಹಾದಿಕ್ ಅವರು 41 ಮತ ಮತ್ತು ಪವಾರ್ 33 ಮತಗಳನ್ನು ಪಡೆದರು.
ಗೋಯಲ್ ಮತ್ತು ಬಾಂಡೆ ತಲಾ 48 ಮೊದಲ ಪ್ರಾಶಸ್ತö್ಯದ ಮತಗಳನ್ನು ಪಡೆದರೆ, ಪ್ರಫುಲ್ ಪಟೇಲ್ 43, ಇಮ್ರಾನ್ ಪ್ರತಾಪ್ಘರ್ಹಿ 44 ಮತ್ತು ಶಿವಸೇನೆಯ ಸಂಜಯ್ ರಾವ್ 41 ಮತಗಳನ್ನು ಪಡೆದರು.
ಮಹಾರಾಷ್ಟçದ ವಿಧಾನಸಭೆಯ ಬಲಾಬಲ 288.
ಕಳೆದ ತಿಂಗಳು ಶಿವಸೇನೆ ಶಾಸಕ ರಮೇಶ್ ಲಾಕೆ ನಿಧನರಾದರು. ಅಕ್ರಮ ಹಣ ವರ್ಗಾವಣೆಯಡಿ ಜೈಲಿನಲ್ಲಿರುವ ಎನ್ಸಿಪಿ ಮಾಜಿ ಸಚಿವ ನವಾಬ್ ಮಲಿಕ್ ಮತ್ತು ಶಿವಸೇನೆಯ ಮಾಜಿ ಸಚಿವ ಅನಿಲ್ ದೇಶ್ಮುಖ್ಗೆ ಮತದಾನಕ್ಕೆ ಅವಕಾಶ ಸಿಗಲಿಲ್ಲ.
ಓರ್ವ ಶಿವಸೇನೆ ಶಾಸಕ ಸುಹಾಸ್ ಖಡೆ ಮತವನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿತು.
ಮಹಾರಾಷ್ಟçದಲ್ಲಿ ಕಾಂಗ್ರೆಸ್ 44 ಶಾಸಕರೂ ತಮ್ಮ ಮತವನ್ನು ಕಾಂಗ್ರೆಸ್ ಅಭ್ಯರ್ಥಿಗಷ್ಟೇ ಹಾಕಿದರು. ಎಂಐಎA ಮಹಾಮೈತ್ರಿ ಕೂಟಕ್ಕೆ ಬೆಂಬಲ ನೀಡಿದರೂ ನಾಲ್ಕನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮಹಾಮೈತ್ರಿಕೂಟಕ್ಕೆ ಆಗಲಿಲ್ಲ.
ಪಕ್ಷೇತರ ಶಾಸಕರಲ್ಲಿ ಬಹುತೇಕರು ಬಿಜೆಪಿಯನ್ನು ಬೆಂಬಲಿಸಿದ್ದು ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ವರದಾನವಾಯಿತು.