ಪ್ರವಾದಿ ಮೊಹಮ್ಮದ್ ಬಗ್ಗೆ ಭಾರತದಲ್ಲಿ ಮಾಜಿ ಬಿಜೆಪಿ ವಕ್ತಾರೆ ಹಾಗೂ ನವೀನ್ ಜಿಂದಾಲ್ ಅವರು ಅವಹೇಳನ ಮಾಡಿದ ವಿಚಾರವಾಗಿ ಕುವೈತ್ನಲ್ಲಿ ಪ್ರತಿಭಟಿಸಿದ್ದ ಭಾರತೀಯರ ವೀಸಾ ಶಾಶ್ವತವಾಗಿ ರದ್ದು ಮಾಡಿ ಅವರನ್ನು ಗಡಿಪಾರು ಮಾಡಿ ಕುವೈತ್ ಸರ್ಕಾರ ಆದೇಶ ಹೊರಡಿಸಿದೆ.
ಕುವೈತ್ ಸರ್ಕಾರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರನ್ನು ಬಂಧಿಸಿ ಅವರ ದೇಶಕ್ಕೆ ಕಳುಹಿಸಲು ಸೂಚನೆಗಳನ್ನು ಹೊರಡಿಸಿದೆ. ಅಲ್ಲದೇ, ಕುವೈತ್ನಲ್ಲಿರುವ ವಲಸಿಗರು ಇಲ್ಲಿನ ಕಾನೂನುಗಳನ್ನು ಗೌರವಿಸಬೇಕು ಮತ್ತು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಹೇಳಿದೆ.
ಪ್ರತಿಭಟನಾಕಾರರು ದೇಶದ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಕುವೈತ್ನಲ್ಲಿ ವಲಸಿಗರು ಪ್ರತಿಭಟನೆ ಹಾಗೂ ಧರಣಿ ನಡೆಸಲು ಅವಕಾಶ ಇಲ್ಲ ಎಂದು ಅರಬ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು.
ಆರ್ಎಸ್ಎಸ್ ಸಂಯೋಜಿತ ಅಖಿಲ ಭಾರತ ಪ್ರಗ್ಯಾ ಪ್ರವಾಹ್ ದ ನಾಯಕರಾದ ಜೆ ನಂದಕುಮಾರ್ ಅವರು ಈ ವರದಿಯನ್ನು ಟ್ವೀಟ್ ಮಾಡಿದ್ದಾರೆ.
ಈ ವರದಿಯಲ್ಲಿ ಬರೆದುಕೊಂಡಿರುವ ಅವರು, ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಫರ್ಹೇಲ್ ನಗರದಲ್ಲಿ ಪ್ರತಿಭಟಿಸಿದ್ದ ಭಾರತೀಯರನ್ನು ಗಡಿಪಾರು ಮಾಡಲು ಕುವೈತ್ ಸರ್ಕಾರ ನಿರ್ಧರಿಸಿದೆ. ಅವರ ವೀಸಾ ಶಾಶ್ವತವಾಗಿ ರದ್ದಾಗಿದ್ದು, ಅವರನ್ನು ಗಡಿಪಾರು ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
Kuwait :
Govt of Kuwait decided to deport Indians who conducted protest rally in Faraheel city of Kuwait against Prophet remarks by Nupur Sharma. Their Visa will be cancelled permanently and will be deported to India.
https://t.co/1jhOnKCMWv— J Nandakumar (@kumarnandaj) June 12, 2022
ವರದಿಗಳ ಪ್ರಕಾರ, ಪ್ರತಿಭಟನೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಬಂಧಿಸಬೇಕು ಮತ್ತು ಅವರು ಮತ್ತೆಂದು ಕುವೈತ್ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಸರ್ಕಾರ ಪೊಲೀಸರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಜೂನ್ 10 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ಫರ್ಹೇಲ್ ನಗರದಲ್ಲಿ ಭಾರತೀಯ ಮುಸಲ್ಮಾನರು, ಪಾಕಿಸ್ತಾನೀಯರು ಹಾಗೂ ಬಾಂಗ್ಲಾದೇಶಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಅಲ್ಲಾ ಹು ಅಕ್ಬರ್ ಮತ್ತು ಇಲ್ಲಾಲ್ಲಾ ಎಂಬ ಘೋಷಣೆಗಳನ್ನು ಹಾಕಿದ್ದರು.
ಈ ಬಗ್ಗೆ ಕುವೈತ್ ಸರ್ಕಾರ ಪಾಕಿಸ್ತಾನದ ರಾಯಭಾರಿಗಳಿಗೂ ನೋಟಿಸ್ ಜಾರಿ ಮಾಡಿದೆ. ಪಾಕಿಸ್ತಾನದ ನಾಗರೀಕರು ಕುವೈತ್ನಲ್ಲಿ ಪ್ರತಿಭಟನೆ ನಡೆಸುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟಿಸುವಂತಿಲ್ಲ. ಇಲ್ಲಿನ ಕಾನೂನುಗಳನ್ನು ಗೌರವಿಸಬೇಕು. ಒಂದು ವೇಳೆ ಪಾಕಿಸ್ತಾನದ ನಾಗರೀಕರು ಇಂತಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
— Pakistan Embassy UAE (@PakinUAE_) May 24, 2022