ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 6 ಗಂಟೆಯಾದರೂ ಇನ್ನೂ ಮುಗಿದಿಲ್ಲ.
ಆದರೆ ಇಲ್ಲಿಯವರೆಗಿನ ಮತ ಎಣಿಕೆಯ ಅಂಕಿ ಅಂಶದ ಪ್ರಕಾರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರು ಗೆಲ್ಲುವುದು ಖಚಿತವಾಗಿದೆ.
ಮೊದಲ ಪ್ರಾಶಸ್ತö್ಯದ ಮತ ಎಣಿಕೆಯ ಮುಕ್ತಾಯ ಆದಾಗ ಕಾಂಗ್ರೆಸ್ನ ಮಧು ಮಾದೇಗೌಡ ಅವರು ಬಿಜೆಪಿಯ ಮೈ ವಿ ರವಿಶಂಕರ್ ಅವರಿಗಿಂತ 5,905 ಮತಗಳಷ್ಟು ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ಗೆ ಮೊದಲ ಪ್ರಾಶಸ್ತö್ಯದಲ್ಲಿ 32,592, ಬಿಜೆಪಿಗೆ 26,687, ಜೆಡಿಎಸ್ಗೆ 17,072, ಪ್ರಸನ್ನಗೌಡ ಅವರಿಗೆ 6,470, ಈಶ್ವರಪ್ಪ ಆಪ್ತ ವಿನಯ್ ಅವರಿಗೆ 3,672 ಮತ್ತು ವಾಟಾಳ್ ನಾಗರಾಕ್ ಅವರಿಗೆ 480 ಮತಗಳು ಸಿಕ್ಕಿವೆ.
7,307 ಮತಗಳು ತಿರಸ್ಕೃತಗೊಂಡಿವೆ.
ಮೊದಲ ಪ್ರಾಶಸ್ತö್ಯದ ಮತದಲ್ಲೇ ಅಭ್ಯರ್ಥಿ ಗೆಲ್ಲುವ ಸಲುವಾಗಿ 46,083 ಮತಗಳನ್ನು ಪಡೆಯುವುದು ಅನಿವಾರ್ಯ. ಆದರೆ ಇಷ್ಟು ಮತ ಯಾರಿಗೂ ಸಿಕ್ಕಿಲ್ಲ.
ಹೀಗಾಗಿ ಎರಡನೇ ಪ್ರಾಶಸ್ತö್ಯದ ಮತಗಳ ಆಧಾರದಲ್ಲೇ ಮತ ಎಣಿಕೆ ಮುಂದುವರಿದಿದೆ. ಎರಡನೇ ಪ್ರಾಶಸ್ತö್ಯದ ಮತ ಎಣಿಕೆಯಲ್ಲಿ ಏಳು ಮಂದಿ ಕಣದಿಂದ ಹೊರಬಿದ್ದಿದ್ದಾರೆ.
ಎರಡನೇ ಪ್ರಾಶಸ್ತö್ಯದ ಮತದಲ್ಲಿ ಕಾಂಗ್ರೆಸ್ಗೆ 107, ಬಿಜೆಪಿಗೆ 46, ಜೆಡಿಎಸ್ಗೆ 35, ಪ್ರಸನ್ನಗೌಡಗೆ 35 ಮತ್ತು ವಿನಯ್ಗೆ 15 ಮತಗಳು ಸಿಕ್ಕಿವೆ.