ಎಷ್ಟು ಸಮಯಕ್ಕೊಮ್ಮೆ ಮಲ ವಿಸರ್ಜನೆಗೆ ಹೋಗಬೇಕು? ಈ ಪ್ರಶ್ನೆಯನ್ನು ನೀವು ಗೂಗಲ್ ನಲ್ಲಿ ಕೇಳಿದರೆ ತುಂಬಾ ಉತ್ತರ ಸಿಗುತ್ತದೆ. ದಿನಕ್ಕೆ ಮೂರು ಬಾರಿ ಮಲ ವಿಸರ್ಜನೆಗೆ ಹೋಗಬೇಕು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವು ತಜ್ಞರು ಮೂರು ದಿನಕ್ಕೊಮ್ಮೆ ಎಂಬ ಮಾತನ್ನು ಹೇಳುತ್ತಾರೆ. ಅಸಲಿಗೆ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗಲ್ಲ. ಇದು ಸಹಜವಾದ ಪ್ರಕ್ರಿಯೆ. ಕೆಲವೊಮ್ಮೆ ಕೆಲವರು ಮಲ ವಿಸರ್ಜನೆಗೆ ಅರ್ಜೆಂಟ್ ಆದರೂ, ಬೇಗ ಟಾಯ್ಲೆಟ್ ಗೆ ಹೋಗದೇ ತಡೆ ಹಿಡಿದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಅಪಾಯ ಎಂದು ತಜ್ಞರು ಹೇಳುತ್ತಾರೆ.
ಅರ್ಜೆಂಟ್ ಆದರೂ ಮಲ ವಿಸರ್ಜನೆ ತಡೆ ಹಿಡಿಯುವುದರಿಂದ ಬೋವೆಲ್ ಕ್ಯಾನ್ಸರ್, ಮೂಲ ವ್ಯಾಧಿ, ಕರುಳಿನಲ್ಲಿ ಸಣ್ಣ ಸಣ್ಣ ರಂಧ್ರ ಏರ್ಪಡುವಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವ ಇದೆ. ಹೀಗಾಗಿ, ಟಾಯ್ಲೆಟ್ ಬಂದಾಗ ಹೋಗಿಬಿಡಬೇಕು.
ನಾವು ತೆಗೆದುಕೊಳ್ಳುವ ಆಹಾರ ಹೊಟ್ಟೆಯಲ್ಲಿ ಹೇಗೆ ಮುಂದಕ್ಕೆ ಚಲಿಸುತ್ತದೆ ಎಂಬುದನ್ನು 20ನೇ ಶತಮಾನದ ಆರಂಭದಲ್ಲಿ ಗ್ರಹಿಸಿದರು.ಇದನ್ನು ಗ್ಯಾಸ್ಟ್ರಿಕ್ ರಿಪ್ಲೆಕ್ಸ್ ಎನ್ನುತ್ತಾರೆ. ಬೆಳಗ್ಗೆ ತೆಗೆದುಕೊಳ್ಳುವ ಉಪಹಾರ ಕರುಳುಗಳಲ್ಲಿ ವೇಗವಾಗಿ ಮುಂದಕ್ಕೆ ಹೋಗುತ್ತದೆ ಎಂಬುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಸಾಬೀತಾಗಿದೆ.
ಹೊಟ್ಟೆಯನ್ನು ಕ್ಲೀನ್ ಮಾಡಿಕೊಳ್ಳಬೇಕು ಎಂದು ಮೆದುಳು ಸಂದೇಶ ಕಳಿಸಿದಾಗ ಚಿಕ್ಕ ಮಕ್ಕಳು ಆಟೋಮೇಟಿಕ್ ಆಗಿ ಮಲ ವಿಸರ್ಜನೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಅವರೇನು ತೀರ ಕಷ್ಟ ಪಡಬೇಕಾಗುವುದಿಲ್ಲ. ಆದರೇ, ನಡಿಗೆ ಕಲಿತ ಮೇಲೆ ಮಕ್ಕಳು ಮಲ ವಿಸರ್ಜನೆಯನ್ನು ತಡೆದುಕೊಳ್ಳುವುದನ್ನು ಕಲಿಯುತ್ತಾರೆ.
ಜೀರ್ಣ ವ್ಯವಸ್ಥೆಯ ಜೊತೆಗೆ ಹೊಟ್ಟೆಯನ್ನು ನಿಯಂತ್ರಿಸುವುದು ಮಾನವದೇಹದಲ್ಲಿ ಪ್ರಮುಖವಾದುದು. ಆದರೇ, ಕೆಲವರಲ್ಲಿ ಈ ನಿಯಂತ್ರಣ ಎನ್ನುವುದು ತೀವ್ರವಾಗಿ ಇರುತ್ತದೆ. ಮಲ ವಿಸರ್ಜನೆ ಮಾಡಲು ದೇಹ ಹೇಳುತ್ತಿದ್ದರೂ, ಟಾಯ್ಲೆಟ್ ಗೆ ಹೋಗಲು ಇದು ಸರಿಯಾದ ಸಮಯ ಅಲ್ಲ ಎಂದು ತಡೆದುಕೊಂಡೆ ಇರುತ್ತಾರೆ.
ಆದರೇ, ಸಮಯಕ್ಕೆ ಸರಿಯಾಗಿ ಮಲ ವಿಸರ್ಜನೆ ಆಗದಿರಲು ಅನೇಕ ಕಾರಣಗಳಿವೆ.
# ಆಜೀರ್ಣತೆ
# ಹೊಟ್ಟೆ ನೋವು
# ಮಲ ವಿಸರ್ಜನೆಯ ಕ್ರಮಗಳ ಪಾಲನೆ ಆಗದಿರುವುದು
# ಹೊಟ್ಟೆಯಲ್ಲಿ ಬಾವು
# ಗ್ಯಾಸ್
# ಹೊಟ್ಟೆಯಲ್ಲಿ ವೇಗವಾಗಿ ಆಹಾರ ಮುಂದಕ್ಕೆ ಸಾಗದಿರುವುದು.
ಹೀಗೆ ಹಲವು ಕಾರಣ ನೀಡಬಹುದು.
ಎಷ್ಟು ಸಮಯಕ್ಕೊಮ್ಮೆ ಮಲ ವಿಸರ್ಜನೆಗೆ ಹೋಗಬೇಕು ಎಂಬುದು ಈ ಹೊತ್ತಿಗೆ ನಿಮ್ಮ ಅರಿವಿಗೆ ಬಂದಿರುತ್ತದೆ.
ನಾವು ತೆಗೆದುಕೊಳ್ಳುವ ಆಹಾರದ ಜೀರ್ಣ ಕ್ರಿಯೆ ಬಳಿಕ ಎಷ್ಟು ಹೊತ್ತಿಗೆ ಮಲದ ರೂಪದಲ್ಲಿ ಹೊರಗೆ ಬರುತ್ತದೆ ಎಂಬುದನ್ನು ನಾವು ಗಮನಿಸಬೇಕು. ಈ ಸಮಯವನ್ನು ಗುರುತಿಸುವುದು ತುಂಬಾನೇ ಮುಖ್ಯ. ಯಾಕಂದರೆ ಕೆಲವೊಮ್ಮೆ ಆಹಾರ ಸೇವಿಸಿದ ಸ್ವಲ್ಪ ಹೊತ್ತಿಗೆ ಮಲ ವಿಸರ್ಜನೆಗೆ ಹೋಗಬೇಕು ಎನಿಸುತ್ತದೆ. ಆಗ ನಿಮಗೇ ಡಯೇರಿಯಾ ಅಥವಾ ಆಜೀರ್ಣತೆ ಉಂಟಾಗಿರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಒಂದು ಮುಸುಕಿನ ಜೋಳದ ಬೀಜವನ್ನು ಒಮ್ಮೆ ನುಂಗಿ ನೋಡಿ. ಅದು ಎಷ್ಟು ಸಮಯಕ್ಕೆ ಮಲದ ಮೂಲಕ ಹೊರಬರುತ್ತದೆ ಎಂಬುದನ್ನು ಗಮನಿಸಿ. ಆ ಬೀಜ ಎಂಟರಿಂದ 24 ಗಂಟೆಗಳೋಳಗೆ ಹೊರಗೆ ಬರುತ್ತದೆ.
ಟಾಯ್ಲೆಟ್ ಗೆ ಯಾವಾಗ ಹೋಗಬೇಕು ಎಂಬುದನ್ನು ಯಾರೂ ಹೇಳಿಕೊಡಬೇಕಿಲ್ಲ. ಹೊಟ್ಟೆಯನ್ನು ಯಾವಾಗ ಕ್ಲೀನ್ ಮಾಡಿಕೊಳ್ಳಬೇಕು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಆದ್ದರಿಂದ ಮಲ ವಿಸರ್ಜನೆಯನ್ನು ತುಂಬಾ ಹೊತ್ತು ತಡೆ ಹಿಡಿಯಬಾರದು. ಒಂದೊಮ್ಮೆ ತಡೆದುಕೊಂಡರೆ ಆಹಾರದಿಂದ ಬಿಡುಗಡೆಯಾಗುವ ವ್ಯರ್ಥಗಳು ನಮ್ಮ ಶರೀರದಲ್ಲೇ ಉಳಿದುಕೊಳ್ಳಲಿವೆ. ಕೊಳೆಯುತ್ತದೆ. ಗ್ಯಾಸ್ ರಿಲೀಸ್ ಆಗಲಿದೆ. ಮೆಟಬೋಲಿಕ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ಕೂಡಾ ಬಿಡುಗಡೆ ಆಗುತ್ತದೆ. ಇದು ಕರುಳಿನ ಗೋಡೆಗಳಿಗೆ ಹಾನಿ ಮಾಡುತ್ತದೆ.
ಪ್ರತಿಯೊಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಅಂದಾಜು 6 ಟನ್ ಮಲವನ್ನು ವಿಸರ್ಜಿಸುತ್ತಾನೆ. ಈ ಮಲದಲ್ಲಿ..
# ನೀರು
# ಬ್ಯಾಕ್ಟಿರಿಯಾ
# ಕಾರ್ಬೋ ಹೈಡ್ರೆಟ್ಸ್
# ಜೀರ್ಣವಾಗದ ಆಹಾರ
# ಕೊಬ್ಬಿನ ಅಂಶ ಇರುತ್ತದೆ.
ತಡೆ ಹಿಡಿದ ಮಲದ ಕಾರಣ, ದೊಡ್ಡ ಕರುಳಿನಲ್ಲಿ ರಾಸಾಯನಿಕ ಸೇರಿಕೊಂಡು ಅನಾರೋಗ್ಯ ಸಮಸ್ಯೆಗಳು ಉಂಟಾಗುವುದನ್ನು ತಜ್ಞರು ಗುರುತಿಸಿದ್ದಾರೆ.
ಶರೀರದಲ್ಲಿ ರಕ್ತ, ಎಲ್ಲೋ ಬೈಲ್, ಬ್ಲ್ಯಾಕ್ ಬೈಲ್ ಸಮ ತೂಕದಿಂದ ಇರಬೇಕು ಎಂದು ಗ್ರೀಕರ ಕಾಲದ ರಚನೆಗಳು ಹೇಳುತ್ತವೆ. ನಾವು ಆರೋಗ್ಯವಾಗಿರಲು ಇವು ಸಮ ತೂಕದಲ್ಲೇ ಇರುವುದು ಕಡ್ಡಾಯ.
ಆಜೀರ್ಣ ಸಮಸ್ಯೆ ನಿವಾರಣೆಗೆ ಆಹಾರದಲ್ಲಿ ಫೈಬರ್ ಕಂಟೆಂಟ್ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು.. ಪಾನಿಯಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ಹೊಟ್ಟೆ ಕಡೆ ಶ್ರದ್ದೆ ವಹಿಸಸಬೇಕು. ಮಲ ಬಂದಾಗ ಅದನ್ನು ತಡೆ ಹಿಡಿಯದೆ ಕೂಡಲೇ ಟಾಯ್ಲೆಟ್ ಗೆ ಹೋಗಬೇಕು