ಬಹುಭಾಷಾ ತಾರೆ, ಹಿರಿಯ ನಟಿ ಲಕ್ಷ್ಮಿ ಅವರ ಮಗಳು, ನಟಿ ಐಶ್ವರ್ಯ ಬಹಳ ಕಷ್ಟದಲ್ಲಿದ್ದಾರೆ. ಅವರ ಹೆಸರಲ್ಲಿ ಮಾತ್ರ ಐಶ್ವರ್ಯ ಇದೆ.. ಆದರೇ ನಿಜ ಜೀವನದಲ್ಲಿ ಅವರು ಬರ್ಬಾದ್ ಆಗಿ ಹೋಗಿದ್ದಾರೆ. ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ಮಿಂಚಿದ ಕಿರುತೆರೆಯಲ್ಲೂ ಮಿಂಚಿದ ನಟಿ ಐಶ್ವರ್ಯ ಇಂದು ಬಡತನವನ್ನು ಹೊದ್ದು ಮಲಗಿದ್ದಾರೆ. ಒಪ್ಪೋತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂದರೇ ನಿಮಗೆ ಅಚ್ಚರಿ ಆಗುತ್ತದೆ. ಆದರೇ ಇದು ಸತ್ಯ.
ಸದ್ಯ ಚೆನ್ನೈನಲ್ಲಿಯೇ ವಾಸ ಮಾಡುತ್ತಿರುವ ಐಶ್ವರ್ಯ, ದಿನದ ಹೊಟ್ಟೆ ತುಂಬಿಸಿಕೊಳ್ಳಲು ಮನೆ ಮನೆಗೂ ತೆರಳಿ ಸೋಪ್ ಮಾರಾಟ ಮಾಡುತ್ತಿದ್ದಾರೆ. ಈ ವಿಚಾರವನ್ನು ಖುದ್ದಾಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನನಗೆ ಮಾಡೋಕೆ ಕೆಲಸ ಇಲ್ಲ. ಸಿನೆಮಾಗಳಲ್ಲಿ ಆಫರ್ ಇಲ್ಲ. ಸೀರಿಯಲ್ ನಲ್ಲಿಯೂ ಯಾರೂ ಚಾನ್ಸ್ ಕೊಡುತ್ತಿಲ್ಲ. ಪರಿಣಾಮ ಆದಾಯ ಇಲ್ಲ. ಮನೆ ನಡೆಯಬೇಕು ಎಂದರೇ ಕೆಲಸ ಬೇಕು. ಬೇರೆ ಎಲ್ಲಿಯೂ ಕೆಲಸ ಸಿಗದ ಕಾರಣ ಮನೆ ಮನೆಗೆ ತೆರಳಿ ಸೋಪ್ ಸೇಲ್ ಮಾಡುತ್ತಿರುವೆ. ಒಳ್ಳೆ ವೇತನ ಸಿಗುತ್ತೆ ಎನ್ನುವುದಾದರೆ ಮನೆ ಕೆಲಸ ಮಾಡಲು ಸಹ ಸಿದ್ದ ಎನ್ನುತ್ತಾರೆ ಐಶ್ವರ್ಯ.. ಲಕ್ಷ್ಮಿಯವರ ಮುದ್ದಿನ ಪುತ್ರಿಯ ಈ ಮಾತುಗಳನ್ನು ಕೇಳಿದರೆ ಜೀವನ ಅಂದರೆ ಇಷ್ಟೇನಾ ಎಂದು ಎನಿಸಿಬಿಡುತ್ತದೆ.
ಅಂದ ಹಾಗೆ, ತಾನು ಈ ಕೆಲಸ ಮಾಡುತ್ತಿರುವುದಕ್ಕೆ ನನಗೇನು ನೋವಿಲ್ಲ. ನಿಜ ಹೇಳಬೇಕು ಎಂದರೇ ನಾನೀಗ ಸಂತೋಷವಾಗಿದ್ದೇನೆ. ಕಾರಣ ನನಗೆ ಇಂದು ಯಾವುದೇ ಸಾಲ ಇಲ್ಲ. ಇತರೆ ಸಮಸ್ಯೆ ಕೂಡಾ ಇಲ್ಲ. ಆದರೇ, ನನಗೆ ಸರಿಯಾದ ಒಂದು ಕೆಲಸ ಸಿಕ್ಕಿದಲ್ಲಿ ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳುತ್ತೇನೆ. ಸ್ವಾವಲಂಬಿ ಜೀವನ ನಡೆಸುತ್ತೇನೆ ಎನ್ನುತ್ತಾರೆ ನಟಿ ಐಶ್ವರ್ಯ.
ನಾನು ನಾಲ್ವರು ಮಕ್ಕಳ ಜೊತೆ ಇದ್ದೇನೆ. ಯೋಗ ಮಾಡುತ್ತಿರುವ ಕಾರಣ ದಿನಕ್ಕೊಮ್ಮೆ ಮಾತ್ರ ಊಟ ಮಾಡುತ್ತೇನೆ. ನನ್ನ ಆರ್ಥಿಕ ಪರಿಸ್ಥಿತಿ ಬದಲಾಗಬೇಕು ಎಂದರೇ, ಮೆಗಾ ಸೀರಿಯಲ್ ನಲ್ಲಿ ನಟಿಸುವ ಅವಕಾಶ ಸಿಗಬೇಕು. ನಾನು ಬದುಕಿದ್ದೇ ಧಾರವಾಹಿಗಳಿಂದ. ನನಗೆ ಅನ್ನ ಕೊಟ್ಟಿದ್ದು ಕಿರುತೆರೆ.. ಸಿನಿಮಾಗಳಿಂದ ಅಲ್ಲ ಎಂದು ನಟಿ ಐಶ್ವರ್ಯ ಕಣ್ಣೀರು ಇಡುತ್ತಾರೆ.
ಅಂದಹಾಗೆ ನಟಿ ಐಶ್ವರ್ಯ ಈವರೆಗೂ 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ನ್ಯಾಯಾ0ಗಳಲ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪರಿಚಯ ಆಗಿದ್ದರು. ಕನ್ನಡದ ಹೊಸ ಕಾವ್ಯ, ಪಾಂಡವರು, ಒಗ್ಗರಣೆ ಸೇರಿ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ. ಹೀರೋಯಿನ್ ಪಾತ್ರಗಳು ಸಿಗದಿದ್ದರೂ ಪೋಷಕ ಪಾತ್ರಗಳಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದಾರೆ.