ಇಂದು ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವ ದಾಖಲೆ ನಿರ್ಮಾಣ ಮಾಡಿದೆ. ಮೊದಲ ಬ್ಯಾಟೀಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಬರೋಬ್ಬರಿ 498 ರನ್ಗಳ ಗುರಿ ನೀಡಿದೆ.
ನೆದರ್ಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ 3 ಏಕದಿನ ಸರಣಿಯ ಮೊದಲ ಏಕದಿನ ಪಂದ್ಯ ಇಂದು ಆರಂಭವಾಗಿದೆ. ಟಾಸ್ ಗೆದ್ದ ನೆದರ್ಲೆಂಡ್ ಬೌಲಿಂಗ್ ಆಯ್ದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್ಗಳ ಅಂತ್ಯಕ್ಕೆ ಬರೋಬ್ಬರಿ 498 ರನ್ಗಳನ್ನು ಬಾರಿಸಿದೆ. ಆ ಮೂಲಕ ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಬಾರಿಸುವ ಮೂಲಕ ವಿಶ್ವದಾಖಲೆ ಮಾಡಿದೆ. ಮೂವರು ದೈತ್ಯ ಬ್ಯಾಟ್ಸ್ಮನ್ಗಳು ಶತಕ ಬಾರಿಸಿದ್ದಾರೆ.
ಈ ಮೊದಲು ದಕ್ಷಿಣ ಆಫ್ರಿಕಾ ತಂಡ 2 ಏಕದಿನ ಪಂದ್ಯಗಳಲ್ಲಿ 3 ಬ್ಯಾಟ್ಸ್ಮನ್ಗಳು ಶತಕ ಬಾರಿಸಿದ್ದಾರೆ. ಅನಂತರ ಇದೀಗ, ಇಂಗ್ಲೆಂಡ್ ಈ ಸ್ಥಾನ ಆಕ್ರಮಿಸಿಕೊಂಡಿದೆ.
ಇಂಗ್ಲೆಂಡ್ ಬ್ಯಾಟ್ಸ್ಮನ್ಸ್ಗಳಾದ ಪಿಲ್ ಸಾಲ್ಟ್ 93 ಬೌಲ್ಗಳಿಗೆ 122 ರನ್, ಡೇವಿಡ್ ಮಲಾನ್ 109 ಬೌಲ್ಗಳಿಗೆ 125 ರನ್, ಜೋಸ್ ಬಟ್ಲರ್ 70 ಬೌಲ್ಗಳಿಗೆ 162 ರನ್ಗಳನ್ನು ಬಾರಿಸಿದ್ದಾರೆ. ಅನಂತರ ಕ್ರೀಸ್ಗಿಳಿದ ಲಿವಿಂಗ್ ಸ್ಟೋನ್ 22 ಬೌಲ್ಗಳಿಗೆ 66 ರನ್ ಬಾರಿಸಿದ್ದಾರೆ. ನೆದರ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ ಆರಂಭಿಸಬೇಕಿದೆ.