ಪ್ರಧಾನಿ ಮೋದಿ ಭೇಟಿಯ ಹೊತ್ತಲ್ಲಿ ಬಿಜೆಪಿಯ ನಾಯಕರು ಹಿಂದಿಗಳಲ್ಲಿ ಪೋಸ್ಟರ್, ಬ್ಯಾನರ್ಗಳನ್ನು ಹಾಕಿ ತಮ್ಮ ಹಿಂದಿ ಗುಲಾಮಗಿರಿಯನ್ನು ಪ್ರದರ್ಶಿಸಿದ್ರೆ ಅತ್ತ ಪ್ರಧಾನಿ ಮೋದಿಯವರು ತಮ್ಮ ಭೇಟಿಯ ಬಗ್ಗೆ ಕನ್ನಡದಲ್ಲೇ ವಿವರ ನೀಡಿದ್ದಾರೆ.
ಇಂದು ಅಪರಾಹ್ನ, ನಾನು ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್), ಬೆಂಗಳೂರು ಇಲ್ಲಿ ಬೇಸ್ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣ.150 ಟೆಕ್ ಹಬ್ ಗಳ ಲೋಕಾರ್ಪಣೆ ಕೂಡ ಮಾಡುವೆ . ಇವನ್ನು ಐಟಿಐಗಳನ್ನು ಉನ್ನತೀಕರಿಸಿ ಅಭಿವೃದ್ಧಿಗೊಳಿಸಲಾಗಿದೆ.
— Narendra Modi (@narendramodi) June 20, 2022
ಸಂಜೆ 5.30ರ ವೇಳೆಗೆ ಮೈಸೂರು ತಲುಪುವೆ. ಅಲ್ಲಿಯೂ ಪ್ರಮುಖ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಇಲ್ಲವೆ ಶಿಲಾನ್ಯಾಸ ನೆರವೇರಿಸುವೆ. ಸುತ್ತೂರು ಮಠದ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವೆ. ನಾಳೆ ಬೆಳಗ್ಗೆ, ಮೈಸೂರಿನಲ್ಲಿ ಯೋಗ ದಿನದ ಕಾರ್ಯಕ್ರಮವೂ ನೆರವೇರಲಿದೆ.
— Narendra Modi (@narendramodi) June 20, 2022
ಪ್ರಧಾನಿ ಮೋದಿಯವರೇ ತಮ್ಮ ಟ್ವೀಟ್ನಲ್ಲಿ ಹಿಂದಿ ಬಳಸಿಲ್ಲವಾದರೂ ಕರ್ನಾಟಕದ ಬಿಜೆಪಿ ನಾಯಕರು ತಾಮುಂದು ನಾಮುಂದು ಎನ್ನುವಂತೆ ಮೋದಿ ಅವರನ್ನು ಮೆಚ್ಚಿಸುವ ಸಲುವಾಗಿ ಕನ್ನಡವೇ ಇಲ್ಲದ ಹಿಂದಿ ಪೋಸ್ಟರ್ ಹಾಕಿ ಗುಲಾಮಗಿರಿ ಪ್ರದರ್ಶಿಸಿದ್ದಾರೆ.