2014ರಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಆದ ನಂತರ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈ ಪೈಕಿ ಬಿಜೆಪಿ ಅಧಿಕಾರ ಹಿಡಿದಿರುವುದು ಆಪರೇಷನ್ ಕಮಲದ ಮೂಲಕ. ಆಪರೇಷನ್ ಕಮಲಕ್ಕೆ ಬಲಿಯಾದ ಸರ್ಕಾರಗಳು ಎಷ್ಟು? ಬಹುಮತ ಇದ್ದರು ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ವಿಫಲವಾದ ಸನ್ನಿವೇಶಗಳು ಎಷ್ಟು ಎಂಬುದನ್ನು ಪ್ರತಿಕ್ಷಣ ವಿಶೇಷದಲ್ಲಿ ನೋಡೋಣ.
ಅರುಣಾಚಾಲ ಪ್ರದೇಶ:
2104ರ ಅರುಣಾಚಲ ಪ್ರದೇಶ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಕಾಂಗ್ರೆಸ್ 42, ಬಿಜೆಪಿ 11 ಗೆದ್ದಿತ್ತು. 2016ರಲ್ಲಿ ಸಿಎಂ ಪೆಮಾ ಖಂಡು ಸೇರಿ ಕಾಂಗ್ರೆಸ್ ನ 41 ಶಾಸಕರು ಪಕ್ಷ ತೊರೆದು ಅವರೆಲ್ಲ PPA ಪಾರ್ಟಿ ಸೇರಿದರು. ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬಿಹಾರ :
2015ರಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ JDU-RJD-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಈ ಕೂಟದಲ್ಲಿ ಬಿರುಕು ಮೂಡಿಸಲು ಬಿಜೆಪಿ ಭಾರೀ ಪ್ರಯತ್ನ ನಡೆಸಿ ಕೊನೆಗೆ ಅದರಲ್ಲಿ ಯಶಸ್ವಿಯಾಯಿತು. 2017ರಲ್ಲಿ ಮೈತ್ರಿಕೂಟದಿಂದ ಹೊರಬಂದ jdu, ಬಿಜೆಪಿ ಜೊತೆ ಕೈಜೋಡಿಸಿತು. ಅಧಿಕಾರಕ್ಕೆ ಏರಿತು.
ಮಧ್ಯಪ್ರದೇಶ :
2018ರಲ್ಲಿ ಕಾಂಗ್ರೆಸ್ 121ಸೀಟ್ ಗೆದ್ದು ಪಕ್ಷೇತರರ ಜೊತೆಗೂಡಿ ಕಮಲ್ ನಾಥ್ ಸರ್ಕಾರ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಸೇರಿ 26 ಶಾಸಕರನ್ನು ಬಿಜೆಪಿ ಆಪರೇಷನ್ ಕಮಲದ ಮೂಲಕ ಸೆಳೆಯಿತು. ಪರಿಣಾಮ 2020ರ ಮಾರ್ಚ್ ನಲ್ಲಿ ಕಮಲನಾಥ್ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು.
ಮಣಿಪುರ :
2017ರ್ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ 28ರಲ್ಲಿ ಕಾಂಗ್ರೆಸ್, 21ರಲ್ಲಿ ಬಿಜೆಪಿ ಜಯ ಗಳಿಸಿದ್ದವು. ಅದರೆ ಸರ್ಕಾರ ರಚಿಸಿದ್ದು ಮಾತ್ರ ಬಿಜೆಪಿ. ಕಾಂಗ್ರೆಸ್ ಪಕ್ಷದ 9 ಶಾಸಕರನ್ನು ಬಿಜೆಪಿ ಆಪರೇಷನ್ ಕಮಲದ ಮೂಲಕ ಸೆಳೆದುಕೊಂಡಿತು.
ಗೋವಾ :
2017ರ ಗೋವಾ ಚುನಾವಣೆ 40ರಲ್ಲಿ ಕಾಂಗ್ರೆಸ್ 17ರಲ್ಲಿ, ಬಿಜೆಪಿ 13ರಲ್ಲಿ ಗೆದ್ದಿತ್ತು.ಆದರೇ ಇಲ್ಲೂ ಸರ್ಕಾರ ರಚನೆ ಮಾಡಿದ್ದು ಬಿಜೆಪಿಯೇ.10ಪಕ್ಷೇತರರು, ಕಾಂಗ್ರೆಸ್ ನ ಓರ್ವ ಶಾಸಕ ಬಿಜೆಪಿ ಪಾಲಾದರು. 2019ರಲ್ಲಿ ಕಾಂಗ್ರೆಸ್ ನ 15ಶಾಸಕರು ಕೇಸರಿ ಪಕ್ಷ ಸೇರಿದರು.
ಕರ್ನಾಟಕ :
2018ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. Jds 37- ಕಾಂಗ್ರೆಸ್ 80 ಮೈತ್ರಿಯಾಗಿ ಸರ್ಕಾರ ರಚಿಸಿದ್ವು. 104 ಸೀಟ್ ಗೆದ್ದಿದ್ದ ಬಿಜೆಪಿ ಸುಮ್ಮನಾಗಲಿಲ್ಲ. ಜೆಡಿಎಸ್, ಕಾಂಗ್ರೆಸ್ ಪಕ್ಷದ 16 ಶಾಸಕರನ್ನು ಸೆಳೆದು ಯಡಿಯೂರಪ್ಪ ಸರ್ಕಾರ ರಚಿಸಿದರು.
ಉತ್ತರಾಖಂಡ :
2016ರ ಮಾರ್ಚ್ ನಲ್ಲಿ ಹರೀಶ್ ರಾವತ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 9 ಶಾಸಕರು ಹಿಂಪಡೆದರು. ರಾಷ್ಟ್ರಪತಿ ಆಳ್ವಿಕೆ ವಿಧಿಸಲಾಯಿತು. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಸರ್ಕಾರ ಪುನರ್ ಸ್ಥಾಪಿಸಿತು.