2024ರ ಲೋಕಸಭಾ ಚುನಾವಣೆ ಮುಗಿದ ತಕ್ಷಣವೇ ಕರ್ನಾಟಕವನ್ನು ಎರಡು ಭಾಗ ಮಾಡ್ತಾರಾ ಪ್ರಧಾನಿ ನರೇಂದ್ರ ಮೋದಿ..? 2024ರ ಬಳಿಕ ಭಾರತದಲ್ಲಿ 28 ರಾಜ್ಯಗಳ ಬದಲು 50 ರಾಜ್ಯಗಳಾಗ್ತಾವಾ..?
ಮೂರು ದಿನಗಳ ಹಿಂದೆಯಷ್ಟೇ ಕರ್ನಾಟಕವನ್ನು ಎರಡು ಭಾಗ ಮಾಡುವ ಆ ಮೂಲಕ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಬಗ್ಗೆ ಅರಣ್ಯ ಮತ್ತು ಆಹಾರ ಸಚಿವ ಉಮೇಶ್ ಕತ್ತಿ ಅವರು ಮಾತುಗಳನ್ನಾಡಿದ್ದರು.
ಕತ್ತಿಯವರ ಪ್ರಕಾರ 2024ರಷ್ಟೊತ್ತಿಗೆ ಅಂದರೆ ಇನ್ನು ಕೇವಲ ಎರಡು ವರ್ಷದಲ್ಲಿ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮೋದಿ ಕರ್ನಾಟಕವನ್ನು ಎರಡು ಭಾಗ ಮಾಡ್ತಾರೆ.
ಒಂದು ಕಡೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಅವರು `ಪ್ರಧಾನಿ ಮೋದಿಯವರು ಕರ್ನಾಟಕವನ್ನು ಇಬ್ಭಾಗ ಮಾಡ್ತಾರೆ’ ಎಂಬ ಸಚಿವ ಕತ್ತಿ ಮಾತನ್ನು ಖಂಡಿಸಿದ್ದಾರೆ.
ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ಪ್ರಕಾರ ಕರ್ನಾಟಕ ಎರಡು ಭಾಗ ಆಗುವುದು ನಿಜ.
`ಬಿಜೆಪಿಯವರ ಪ್ಲಾö್ಯನ್ ಇದೆ, ಮೂರು ಕೋಟಿ ಜನಸಂಖ್ಯೆ ಎಲ್ಲಿದೆಯೋ ಅಲ್ಲಿ ಎರಡು ರಾಜ್ಯ ಮಾಡ್ಬೇಕು ಅಂತ ಬಿಜೆಪಿಯವರ ಪ್ಲಾö್ಯನ್ ಇದೆ. ಬಿಲ್ ಥರಬೇಕು ಅಂತ ಬಿಜೆಪಿಯಲ್ಲಿ ಚಿಂತನೆ ನಡೀತಿದೆ. ಬಿಲ್ ಬಂದ್ರೆ ನ್ಯಾಚುರಲ್ ಆಗಿ ಎರಡು ರಾಜ್ಯ ಆಗುತ್ತೆ. ಹಿಂದೆ ಒಂದು ಸಾರಿ ಮೋದಿಯವರು ಪ್ರಸ್ತಾಪ ಮಾಡಿದ್ದರು. ರಾಜ್ಯಗಳು ಸಣ್ಣ ಆದಷ್ಟು ಒಳ್ಳೆದು. ಅಭಿವೃದ್ಧಿಗೆ ಒಳ್ಳೆದು. ಪ್ರತ್ಯೇಕ ಎನ್ನುವ ಪ್ರಶ್ನೆ ಬರಲ್ಲ, ಕಾನೂನೇ ತರ್ತ ಇದ್ದಾರೆ, ಹೀಗಾಗಿ ಪ್ರತ್ಯೇಕ ರಾಜ್ಯ ಎಂಬ ಪ್ರಶ್ನೆಯೇ ಬರಲ್ಲ. ತೆಲಂಗಾಣದAತೆ ಹೋರಾಟ ಅಲ್ಲ, ಕಾನೂನೇ ಬರ್ತಾ ಇದೆ. ಮೂರು ಕೋಟಿಗಿಂತ ಮೇಲೆ ಜನಸಂಖ್ಯೆ ಇದ್ದರೆ ಆ ರಾಜ್ಯದಲ್ಲಿ ಪ್ರತ್ಯೇಕ ರಾಜ್ಯ ಮಾಡ್ಬೇಕು ಅಂತ ಕಾನೂನೇ ಬರ್ತಾ ಇದೆ. ಬಿಜೆಪಿ ಅಜೆಂಡಾದಲ್ಲಿದೆ ಅದು.’
ಹಾಗಾದ್ರೆ ಮೂರು ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳು ಯಾವುವು..? ಮೂರು ಕೋಟಿ ಜನಸಂಖ್ಯೆಯ ಮಾನದಂಡದ ಆಧಾರದ ಮೇಲೆ ಯಾವ ರಾಜ್ಯಗಳೆಲ್ಲ ವಿಭಜನೆ ಆಗಬಹುದು..? ಎಂಬ ಲೆಕ್ಕಾಚಾರ ಇಲ್ಲಿದೆ.
2011ರ ಜನಗಣತಿಯ ಪ್ರಕಾರ ಮೂರು ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳು ಈ ಕೆಳಗಿನಂತಿವೆ.
ಉತ್ತರಪ್ರದೇಶ: 19.98 ಕೋಟಿ
ಮಹಾರಾಷ್ಟç: 11.28 ಕೋಟಿ
ಬಿಹಾರ : 10.40 ಕೋಟಿ
ಪಶ್ಚಿಮ ಬಂಗಾಳ: 9.12 ಕೋಟಿ
ಮಧ್ಯಪ್ರದೇಶ: 7.26 ಕೋಟಿ
ತಮಿಳುನಾಡು: 7.21 ಕೋಟಿ
ರಾಜಸ್ಥಾನ: 6.85 ಕೋಟಿ
ಕರ್ನಾಟಕ: 6.10 ಕೋಟಿ
ಗುಜರಾತ್: 6.04 ಕೋಟಿ
ಒಡಿಶಾ: 4.21 ಕೋಟಿ
ಕೇರಳ: 3.34 ಕೋಟಿ
ಜಾರ್ಖಂಡ್ – 3.29 ಕೋಟಿ
ಅಸ್ಸಾಂ – 3.21 ಕೋಟಿ
ಛತ್ತೀಸ್ಗಢ – 2.55 ಕೋಟಿ
ಹರಿಯಾಣ – 2.53 ಕೋಟಿ
ಉತ್ತರಪ್ರದೇಶವನ್ನು ಮೂರು ರಾಜ್ಯಗಳಾಗಿ ವಿಭಜನೆ ಮಾಡಬೇಕು ಎಂಬ ಕೂಗು ಆರಂಭದಿAದಲೇ ಇದೆ. ಮಹಾರಾಷ್ಟçದಲ್ಲೂ ಇದೇ ರೀತಿಯ ಬೇಡಿಕೆ ಇದೆ. ವಿಭಜನೆಯಿಂದ ಹೊಸದಾಗಿ ರಚಿಸಲ್ಪಟ್ಟಿದ್ದ ಜಾರ್ಖಂಡ್ನಲ್ಲೂ ಜನಸಂಖ್ಯೆ 3 ಕೋಟಿ ದಾಟಿದೆ. ಈಶಾನ್ಯ ಭಾರತದ ಅತೀ ದೊಡ್ಡ ರಾಜ್ಯ ಅಸ್ಸಾಂನಲ್ಲೂ ಜನಸಂಖ್ಯೆ ಮೂರು ಕೋಟಿ ಮೀರಿದೆ. ನಮ್ಮ ಪಕ್ಕದ ರಾಜ್ಯ ಕೇರಳದಲ್ಲೂ ಜನಸಂಖ್ಯೆ ಮೂರು ಕೋಟಿಗಿಂತ ಹೆಚ್ಚಿದೆ.