ತೀವ್ರ ಪ್ರತಿರೋಧದ ಬಳಿಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಡಿದ್ದ ಪಠ್ಯಪುಸ್ತಕ ಅವಾಂತರವನ್ನು ಸಿಎಂ ಬೊಮ್ಮಾಯಿ ಸರ್ಕಾರ ಕೊನೆಗೂ ಸರಿಪಡಿಸುವ ಯತ್ನ ಮಾಡಿದೆ.
1ರಿಂದ 10ನೇ ತರಗತಿಯ ಕನ್ನಡ ಭಾಷಾ ವಿಷಯ, ಪರಿಸರ ಅಧ್ಯಯನ ಮತ್ತು 6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ವಿಷಯಗಳ ಪಠ್ಯದಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿದ್ದ ಅವಾಂತರಗಳನ್ನು ತೆಗೆದು ಹಾಕಿ, ಪಠ್ಯಪುಸ್ತಕಗಳನ್ನು ಮಾರ್ಪಡಿಸಿ ತಿದ್ದೋಲೆ ಹೊರಡಿಸಿ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಬಹುತೇಕ ಎಲ್ಲ ಸಮುದಾಯಗಳ ನೀಡಿದ್ದ ಕಟು ಎಚ್ಚರಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮಣಿದಿದೆ.