ಧಾರವಾಡದಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಸಣ್ಣಪುಟ್ಟ ಕಾರಣಕ್ಕೆ ಹದಿಹರೆಯದ ವಯಸ್ಸಿನಲ್ಲಿ ವಿಚ್ಚೇದನ ಹೊಂದಿ, ಇಳಿ ವಯಸ್ಸಿನಲ್ಲಿ ಒಂದಾದ ಘಟನೆ ಲೋಕ್ ಅದಾಲತ್ ನಲ್ಲಿ ನಡೆದಿದೆ.
85 ವರ್ಷದ ಬಸಪ್ಪ, 80 ವರ್ಷದ ಕಲ್ಲವ್ವ ಬರೋಬ್ಬರಿ 52 ವರ್ಷಗಳ ಹಿಂದೆ ವಿವಾಹ ವಿಚ್ಚೇದನ ಪಡೆದುಕೊಂಡಿದ್ದರು. ಕಳೆದ 52 ವರ್ಷಗಳಿಂದಲೂ ಕಲ್ಲವ್ವಗೆ ಬಾಸಪ್ಪ ಪ್ರತಿ ತಿಂಗಳು ಜೀವನಾ0ಶ ನೀಡುತ್ತಾ ಬಂದಿದ್ದರು. ಆದರೇ ಇತ್ತೀಚಿಗೆ ಇದನ್ನು ನಿಲ್ಲಿಸಿದ್ದರು. ಹೀಗಾಗಿ ಕಲ್ಲವ್ವ ಕೋರ್ಟ್ ಮೆಟ್ಟಿಲೇರಿದ್ದರು.
ಲೋಕ್ ಅದಾಲತ್ ನಲ್ಲಿ ಮುಖಾಮುಖಿಯಾದ ಇಬ್ಬರನ್ನು ನೋಡಿ ನ್ಯಾಯಾಧೀಶರ ಮನಸ್ಸು ಕಲಕಿತು. ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಿದರು. ಹೀಗಾಗಿ 52 ವರ್ಷಗಳ ನಂತರ ಬಸಪ್ಪ, ಕಲ್ಲವ್ವ ಮತ್ತೆ ಒಂದಾದರು