ಕನ್ನಡ ಪ್ರಮುಖ ನ್ಯೂಸ್ ಚಾನೆಲ್ವೊಂದರ ಪ್ರಮುಖ ಆಂಕರ್ವೊಬ್ಬರು ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆ.
ಸದ್ಯ ನ್ಯೂಸ್ ಟಿಆರ್ಪಿಯಲ್ಲಿ ಕನ್ನಡದ ಆ ಚಾನೆಲ್ ಎರಡು ಮತ್ತು ಮೂರನೇ ಸ್ಥಾನಕ್ಕಾಗಿ ಇನ್ನೊಂದು ಪ್ರಮುಖ ನ್ಯೂಸ್ ಚಾನೆಲ್ ಜೊತೆ ಪೈಪೋಟಿ ನಡೆಸುತ್ತಿದೆ.
ಈ ಚಾನೆಲ್ ನ ಪ್ರಮಖ ಟಿವಿ ಆಂಕರ್ವೊಬ್ಬರು ಈಗಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ಕೊಡಲು ಮುಂದಾಗಿದ್ದಾರೆ.
ಶೀಘ್ರವೇ ಇವರು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ.
ದೆಹಲಿಯಲ್ಲಿ ಪ್ರಭಾವ ಹೊಂದಿರುವ ಕರ್ನಾಟಕದ ಮೂಲದ ಪ್ರಭಾವಿ ರಾಜಕಾರಣಿಯ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಟಿಕೆಟ್ ಬಹುತೇಕ ಖಾತ್ರಿ ಆಗಿದೆ.
ಈಗಾಗಲೇ ಇವರಿಗೆ ಕಲಘಟಗಿ, ಧಾರವಾಡ ಎರಡರ ಪೈಕಿ ಒಂದು ಕ್ಷೇತ್ರದ ಪೈಕಿ ವಿಧಾನಸಭಾ ಚುನಾವಣೆಯ ಟಿಕೆಟ್ ಭರವಸೆ ಸಿಕ್ಕಿದೆ ಎನ್ನಲಾಗಿದೆ.
ಹಲವು ತಿಂಗಳ ಈ ಪ್ರಮುಖ ಆಂಕರ್ ಬಿಜೆಪಿ ಟಿಕೆಟ್ಗಾಗಿ ಸಾಕಷ್ಟು ಒತ್ತಡ, ಲಾಬಿಗಳನ್ನು ನಡೆಸುತ್ತಿದ್ದರು.
ಮಾಜಿ ಸಚಿವ ವಿನಯ್ ಕಲಕರ್ಣಿ ಅವರು ಶಾಸಕರಾಗಿದ್ದ ಈಗ ಬಿಜೆಪಿ ಶಾಸಕ ಅಮೃತ ದೇಸಾಯಿ ಪ್ರತಿನಿಧಿಸ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರ ಅಥವಾ ಸಂತೋಷ್ ಲಾಡ್ ಪ್ರತಿನಿಧಿಸುತ್ತಿದ್ದ ಈಗ ಬಿಜೆಪಿಯ ಸಿ ಎಂ ನಿಂಬಣ್ಣನವರ್ ಪ್ರತಿನಿಧಿಸ್ತಿರುವ ಕಲಘಟಗಿ ಕ್ಷೇತ್ರ ಈ ಎರಡರ ಪೈಕಿ ಒಂದರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ನಿರೀಕ್ಷೆ ಇದೆ.
ಬಿಬಿಎಂಪಿ ಚುನಾವಣೆ ಮುಗಿದ ಬಳಿಕವಷ್ಟೇ ಪಕ್ಷಕ್ಕೆ ಸೇರಿ ಎಂದು ರಾಜ್ಯದ ಬಿಜೆಪಿ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕೂ ಮೊದಲೇ ಟಿವಿ ಆಂಕರಿಂಗ್ ಗುಡ್ ಬೈ ಹೇಳಿ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅವರು ಮನಸ್ಸು ಮಾಡಿದ್ದಾರೆ.
ಕೆಲವೇ ದಿನಗಳಲ್ಲಿ ಆ ಪ್ರಮುಖ ಆಂಕರ್ ತಾವು ಕೆಲಸ ಮಾಡುವ ಟಿವಿ ನ್ಯೂಸ್ ಚಾನೆಲ್ಗೆ ಗುಡ್ಬೈ ಹೇಳಿ ಪೂರ್ಣ ಪ್ರಮಾಣದ ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದಾರೆ.
ADVERTISEMENT
ADVERTISEMENT