ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ 75 ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಲು ಸಿದ್ದರಾಮಯ್ಯನವರು ಅಭಿಮಾನಿಗಳು ತೀರ್ಮಾನಿಸಿದ್ದಾರೆ.
ಸಿದ್ದರಾಮಯ್ಯನವರ ಹುಟ್ಟುಹಬ್ಬದ ಆಚರಣೆಗೆ ಸಿದ್ದರಾಮಯ್ಯ-71 ಮಅಋತ ಮಹೋತ್ಸವ ಎಂಬ ಸಮಿತಿರ ರಚನೆಯಾಗಿದೆ. ಈ ಸಮಿತಿಗೆ ಆರ್ವಿ ದೇಶಪಾಂಡೆಯವರು ಗೌರವ ಅಧ್ಯಕ್ಷರಾಗಿದ್ದು, ಕೆಎಸ್ ರಾಜಣ್ಣ ಅಧ್ಯಕ್ಷರು, ಹೆಚ್ಡಿ ಮಹಾದೇವಪ್ಪ ಸ್ವಾಗತ ಸಮಿತಿ ಅಧ್ಯಕ್ಷರು, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ರಾಯರೆಡ್ಡಿ ಮತ್ತು ಭೈರತಿ ಸುರೇಶ್ ಖಜಾಂಚಿಯಾಗಿದ್ದಾರೆ.
ಅಗಸ್ಟ್ 3 ರಂದು ದಾವಣಗೆರೆಯಲ್ಲಿ ಬೃಹತ್ ಸಮಾರಂಭ ಆಯೋಜಿಸಿ ಸುಮಾರು 10 ಲಕ್ಷ ಜನರ ನಡುವೆ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಸಮಾರಂಭ ನೆರವೇರಿಸಲು ಈ ಸಮಿತಿ ಸಿಧ್ಧತೆ ನಡೆಸಿದೆ. ಮಂಗಳವಾರ ಜುಲೈ 4 ರಂದು ಅಮೃತ ಮಹೋತ್ಸವ ಸಮಿತಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮೋತ್ಸವ ಆಚರಣೆಯ ಬಗ್ಗೆ ಮಾಹಿತಿ ನೀಡಲಿದೆ.
ಈ ನಡುವೆ, ಕಾಂಗ್ರೆಸ್ನ ಮತ್ತೊಂದು ಬಣದಿಂದ ಸಿದ್ದರಾಮೋತ್ಸವಕ್ಕೆ ಅಡ್ಡಿ ಎದುರಾಗುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಸಿದ್ದರಾಮಯ್ಯನವರ ನಂತರ ಪಕ್ಷದ ಬೇರೆ ಬೇರೆ ನಾಯಕರು ಮುಂದೆ ದೊಡ್ಡ ದೊಡ್ಡ ಸಮಾರಂಭ ಆಯೋಜಿಸುವ ಬಗ್ಗೆ ಪಕ್ಷದ ನಾಯಕರೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.
ಮಂಗಳವಾರ ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮದ ಸುದ್ದಿಗೋಷ್ಠಿಯ ಬಳಿಕ ಈ ಕಾರ್ಯಕ್ರಮ ಎಷ್ಟು ಅದ್ದೂರಿಯಾಗಿರಲಿದೆ ಹಾಗೂ ಈ ಕಾರ್ಯಕ್ರಮದಲ್ಲಿ ನಿಖರವಾಗಿ ಎಷ್ಟು ಜನ ಬಾಗಿಯಾಗಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ತಿಳಿದುಬರಲಿದೆ.