ಭ್ರಷ್ಟಾಚಾರ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ಜಿಲ್ಲಾಧಿಕಾರಿ ಆಗಿದ್ದ ಜಿ ಮಂಜುನಾಥ್ ಅವರನ್ನು ಅರೆಸ್ಟ್ ಮಾಡಿದೆ.
ಬೆಂಗಳೂರು ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯದಿಂದ ತಮ್ಮ ಪರವಾಗಿ ತೀರ್ಪು ನೀಡಲು ಜಿಲ್ಲಾಧಿಕಾರಿ ಕಚೇರಿಯ ಇಬ್ಬರು ಸಿಬ್ಬಂದಿಗೆ 5 ಲಕ್ಷ ರೂಪಾಯಿ ಲಂಚ ನೀಡಿ ಪ್ರಕರಣದಲ್ಲಿ ಬಂಧಿತರು ಜಿಲ್ಲಾಧಿಕಾರಿ ಆಗಿದ್ದ ಮಂಜುನಾಥ್ ಹೆಸರನ್ನೂ ಹೇಳಿದ್ದರು.
2021ರ ಮೇ ತಿಂಗಳಲ್ಲಿ ಎಸಿಬಿ ಹೆಣೆದಿದ್ದ ಬಲೆಗೆ ಉಪ ತಹಶೀಲ್ದಾರ್ ಮಹೇಶ್ ಮತ್ತು ಗುತ್ತಿಗೆ ನೌಕರ ಚೇತನ್ ಬಿದ್ದಿದ್ದರು. ಭೂ ವಿವಾದದಲ್ಲಿ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯದಿಂದ ತಮ್ಮ ಪರವಾದ ತೀರ್ಪು ಬರುವ ಸಲುವಾಗಿ ಇವರು ಕಕ್ಷಿದಾರರಿಂದ 5 ಲಕ್ಷ ರೂಪಾಯಿ ಲಂಚ ಪಡೆದಿದ್ದಾಗ ಸಿಕ್ಕಿಬಿದ್ದಿದ್ದರು.
ಜಿಲ್ಲಾಧಿಕಾರಿಯನ್ನು ವಿಚಾರಣೆ ನಡೆಸದ ಎಸಿಬಿ ವರ್ತನೆಗೆ ಬಗ್ಗೆ ಕರ್ನಾಟಕ ಹೈಕೋರ್ಟ್ ಕೆಂಡಾಮAಡಲವಾಗಿತ್ತು. ಇದಾದ ಬಳಿಕ ಎಸಿಬಿ ಭ್ರಷ್ಟ ಅಧಿಕಾರಿ ಮಂಜುನಾಥ್ರನ್ನು ಕರೆದು ವಿಚಾರಣೆ ನಡೆಸಿತ್ತು.
ಹೈಕೋರ್ಟ್ ಚಾಟಿಯ ಬಳಿ ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಸರ್ಕಾರ ಸಮಗ್ರ ಮಕ್ಕಳ ಯೋಜನೆ ಕಾರ್ಯಕ್ರಮಕ್ಕೆ ವರ್ಗಾವಣೆ ಮಾಡಿತ್ತು.