ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿಕಾರಿದ್ದಾರೆ.
ಗೃಹ ಬಳಕೆಯ ಅಡುಗೆ ಅನಿಲ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಟ್ವೀಟಿಸಿರುವ ವರುಣ್ ಗಾಂಧಿ
ಗೃಹ ಬಳಕೆಯ ಸಿಲಿಂಡರ್ ಬೆಲೆ ಈಗ 1,050 ರೂಪಾಯಿ ಆಗಿದೆ.
ಇಡೀ ದೇಶದಲ್ಲಿ ನಿರುದ್ಯೋಗ ಅತೀ ಹೆಚ್ಚಿರುವಾಗ ಭಾರತೀಯರು ವಿಶ್ವದಲ್ಲೇ ಅತ್ಯಂತ ದುಬಾರಿ ಎಲ್ಪಿಜಿ ಖರೀದಿಸಬೇಕಿದೆ.
ಎಲ್ಪಿಜಿ ಸಂಪರ್ಕದ ದರವನ್ನು 1,450 ರೂ.ಗಳಿಂದ 2,200 ರೂಪಾಯಿಗೆ ಹೆಚ್ಚಿಸಲಾಗಿದೆ. ಭದ್ರತಾ ಠೇವಣಿ ಮೊತ್ತವನ್ನು 2,900 ರೂಪಾಯಿಗಳಿಂದ 4,400 ರೂಪಾಯಿಗೆ ಏರಿಸಲಾಗಿದೆ. ರೆಗ್ಯೂಲೇಟರ್ ಬೆಲೆಯನ್ನು 100 ರೂಪಾಯಿ ಏರಿಸಲಾಗಿದೆ.
ಬಡವರ ಅಡುಗೆ ಮನೆ ಮತ್ತೆ ಹೊಗೆಯಿಂದ ತುಂಬಲಿದೆ
ಎಂದು ವರುಣ್ ಗಾಂಧಿ ಟ್ವೀಟಿಸಿದ್ದಾರೆ.