ಶಿವಮೊಗ್ಗದ ಭಜರಂಗಳದಳದ ಕಾರ್ಯಕರ್ತ ಹರ್ಷನ ಹಂತಕರಿಗೆ ಜೈಲಿನಲ್ಲಿ ಸೌಲಭ್ಯ ಒದಗಿಸಿದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಹರ್ಷನ ಸಹೋದರಿ ಗೃಹ ಮಂತ್ರಿ ಆರಗ ಜ್ಞಾನೇಂದ್ರರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ, ಸಚಿವರು ತಮ್ಮ ಮಾತಿಗೆ ವಿರೋಧ ವ್ಯಕ್ತಪಡಿಸಿ ರೇಗಾಡಿದ್ದಾರೆ ಎಂದು ಹರ್ಷನ ಸಹೋದರಿ ಆರೋಪಿಸಿದ್ದಾರೆ.
ಈ ವಿಡಿಯೋ ಲಗತ್ತಿಸಿ, ‘ಹಿಂದೂ ಶವ’ ಸಿಕ್ಕಾಗ ಮಾತ್ರ ‘ಹಿಂದೂ ಪ್ರೀತಿ’ ಜಾಗೃತವಾಗುತ್ತದೆಯೇ ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಹರ್ಷನ ಸಾವಿನಲ್ಲಿ ರಾಜಕೀಯ ಲಾಭ ಪಡೆಯಲು ಹೊರಟ ನೀಚರೇ, ಆತನ ಸಹೋದರಿ ನ್ಯಾಯ ಕೇಳಿದರೆ ಬೈದು ಕಳಿಸುತ್ತೀರಾ?
144 ಸೆಕ್ಷನ್ ಜಾರಿಯಲ್ಲಿದ್ದಾಗಲೂ ಹರ್ಷನ ಶವಯಾತ್ರೆ ಮಾಡಿ ಕಲ್ಲು ತೂರಾಟ ಮಾಡಿಸಿದ ನಾಯಕರೇ ಈಗೆಲ್ಲಿದ್ದೀರಿ?
ಯಾರದಾದರೂ “ಹಿಂದೂ ಶವ” ಸಿಕ್ಕಾಗ ಮಾತ್ರ ನಿಮ್ಮ “ಹಿಂದೂ ಪ್ರೀತಿ” ಜಾಗೃತವಾಗುತ್ತಾ ಎಂದು ಪ್ರಶ್ನಿಸಿದೆ.
ಹರ್ಷನ ಸಾವಿನಲ್ಲಿ ರಾಜಕೀಯ ಲಾಭ ಪಡೆಯಲು ಹೊರಟ ನೀಚರೇ, ಆತನ ಸಹೋದರಿ ನ್ಯಾಯ ಕೇಳಿದರೆ ಬೈದು ಕಳಿಸುತ್ತೀರಾ?
144 ಸೆಕ್ಷನ್ ಜಾರಿಯಲ್ಲಿದ್ದಾಗಲೂ ಹರ್ಷನ ಶವಯಾತ್ರೆ ಮಾಡಿ ಕಲ್ಲು ತೂರಾಟ ಮಾಡಿಸಿದ ನಾಯಕರೇ ಈಗೆಲ್ಲಿದ್ದೀರಿ?
ಯಾರದಾದರೂ "ಹಿಂದೂ ಶವ" ಸಿಕ್ಕಾಗ ಮಾತ್ರ ನಿಮ್ಮ "ಹಿಂದೂ ಪ್ರೀತಿ" ಜಾಗೃತವಾಗುತ್ತಾ @BJP4Karnataka #ನಯವಂಚಕಬಿಜೆಪಿ pic.twitter.com/IMqww7QJS3
— Karnataka Congress (@INCKarnataka) July 7, 2022
ಕಾಂಗ್ರೆಸ್ ಘಟಕ ಈ ಟ್ವೀಟ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಹರ್ಷನ ಸಹೋದರಿ ಗೃಹ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.