ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮುಂಗಾರು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಜೀವನಾಡಿ ಕೃಷ್ಣ ರಾಜ ಸಾಗರ ಜಲಾಶಯ ಮಳೆಗಾಲದ ಆರಂಭದಲ್ಲೇ ತುಂಬುತ್ತಿದೆ. ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಿದ್ದು, ಇನ್ನು ಒಂದೆರಡು ದಿನಗಳಲ್ಲಿ ಭರ್ತಿ ಆಗುವ ಸಾಧ್ಯತೆ ಇದೆ. ಜಲಾಶಯ ಭರ್ತಿಯಾಗಲು ಇನ್ನು ಐದು ಅಡಿ ಮಾತ್ರ ಬಾಕಿ ಇದೆ.
# 124.80 ಅಡಿ ಗರಿಷ್ಠ ಮಟ್ಟದ ಕನ್ನಂಬಾಡಿ ಕಟ್ಟೆಗೆ ಈಗ 119.44 ಅಡಿ ನೀರು ಬಂದಿದೆ.
# ಡ್ಯಾಮ್ ಗರಿಷ್ಟ ಸಾಮರ್ಥ್ಯ – 49.452 ಟಿಎಂಸಿ
# ಇಂದಿನ ಸಂಗ್ರಹ ಮಟ್ಟ 42.341 ಟಿಎಂಸಿ
# ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ಸದ್ಯ 38,858 ಕ್ಯೂಸೆಕ್ ನಷ್ಟು ನೀರು ಡ್ಯಾಮ್ ಸೇರುತ್ತಿದೆ.
# ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದರೂ, ಇನ್ನು ಡ್ಯಾಮ್ ತುಂಬದ ಕಾರಣ ಹೊರಕ್ಕೆ ಕಡಿಮೆ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ. ಸದ್ಯ ಹೊರಹರಿವಿನ ಪ್ರಮಾಣ 3,453 ಕ್ಯೂಸೆಕ್ ನಷ್ಟಿದೆ.
ಆದರೆ, ಯಾವುದೇ ಕ್ಷಣದಲ್ಲಾದರೂ ಕೆಆರ್ಎಸ್ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರದಿಂದ ಇರುವಂತೆ ನೀರಾವರಿ ನಿಗಮ ಸೂಚನೆ ನೀಡಿದೆ.