ನಕಲಿ ಎಂದು ಗುರುತಿಸಿ ಸುಮಾರು 10 ಲಕ್ಷ ಖಾತೆಗಳನ್ನು ಪ್ರತಿನಿತ್ಯವು ಅಳಿಸಿಹಾಕಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ.
ಟ್ವಿಟರ್ ಖರೀದಿ ಮಾಡಿದ್ದ ಎಲಾನ್ ಮಸ್ಕ್ ಅವರು ಎತ್ತಿದ್ದ ನಕಲಿ ಖಾತೆಗಳ ಬಗೆಗಿನ ಆಕ್ಷೇಪವನ್ನು ಈ ಬೆಳವಣಿಗೆ ದೃಢಪಡಿಸುವಂತಿದೆ.
ಸಕ್ರಿಯ ಬಳಕೆದಾರರಲ್ಲಿ, ಸ್ವಯಂಚಾಲಿತ ಸ್ಪ್ಯಾಮ್ ಖಾತೆಗಳ ಪ್ರಮಾಣ ಶೇ 5 ಕ್ಕೂ ಕಡಿಮೆ ಎಂದು ಕಂಪನಿಯು ನಿರೂಪಿಸದೇ ಹೋದರೆ ತಾನು ಟ್ವಿಟರ್ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯುಯುವುದಾಗಿ ಟೆಸ್ಲಾ ಸಿಇಒ ಆಗಿರುವ ಮಸ್ಕ್ ಎಚ್ಚರಿಸಿದ್ದರು.
ಆದರೆ, ತಪ್ಪು ಮಾಹಿತಿಗಳ ಪ್ರಸಾರ ಮತ್ತು ಸ್ಕ್ಯಾಮ್ಗಳಿಗೆ ಉತ್ತೇಜನ ನೀಡುವ ಖಾತೆಗಳ ಸಂಖ್ಯೆ ಕುರಿತು ಟ್ವಿಟರ್ ಕಡಿಮೆ ಅಂದಾಜು ಮಾಡಿದೆ. ಸ್ಪ್ಯಾಮ್ ಖಾತೆಗಳ ಸಂಖ್ಯೆ ಒಟ್ಟು ಬಳಕೆದಾರರಿಗಿಂತಲೂ ಶೇ 5 ಕ್ಕೂ ಕಡಿಮೆ ಇದೆ ಎಂದು ಟ್ವಿಟರ್ ಪ್ರತಿಪಾದಿಸಿತ್ತು.