ಇನ್ನು ಐದು ವರ್ಷದಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆ ನಿಷೇಧ ಆಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಾರಾಷ್ಟçದ ಅಕೋಲಾದಲ್ಲಿ ಕೃಷಿ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವದಲ್ಲಿ ಮಾತಾಡಿದ ಸಚಿವ ಗಡ್ಕರಿ,
`2014ರಿಂದ ನಾನು ಹೇಳ್ತಾ ಇದ್ದೆ. ಆರಂಭದಲ್ಲಿ ಜನ ನನ್ನನ್ನು ಹುಚ್ಚ ಎನ್ನುತ್ತಿದ್ದರು. ಆದರೆ ಈಗ ನಾನು ಹೇಳಿದ್ದನ್ನು ಕೇಳುತ್ತಿದ್ದಾರೆ. ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಸಮಾಪ್ತಿ ಆಗಲಿದೆ. ನಿಮ್ಮ ಸ್ಕೂಟರ್ ಅಥವಾ ನಿಮ್ಮ ಕಾರು ಹಸಿರು ಹೈಡ್ರೋಜನ್ ಅಥವಾ ಎಥೆನಾಲ್ನಿಂದ ಚಲಿಸಲಿದೆ. ಅಥವಾ ಸಿಎನ್ಜಿ ಅಥವಾ ಎಲ್ಎನ್ಜಿಯಿಂದ ಚಲಿಸಲಿದೆ’
ಎಂದು ಹೇಳಿದ್ದಾರೆ.
`ನಾನು ಹೇಳುತ್ತಿರುವುದು ನಿಜ ಆಗುತ್ತಿದೆ. ಎಥೆನಾಲ್ ಕ್ಯಾಲೋರಿ ವ್ಯಾಲ್ಯೂ ಪೆಟ್ರೋಲ್ಗೆ ಸಮ. ಈಗ ಪೆಟ್ರೋಲ್, ಡೀಸೆಲ್ನಲ್ಲಿ ಶೇಕಡಾ 10ರಷ್ಟು ಎಥೆನಾಲ್ನ್ನು ಸಮ್ಮಿಶ್ರಣ ಮಾಡಲಾಗುತ್ತಿದೆ. ಇದರಿಂದ ವಾರ್ಷಿಕ 20 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗುತ್ತಿದೆ. ಈ ಪ್ರಮಾಣವನ್ನು ಶೇಕಡಾ 20ಕ್ಕೆ ಹೆಚ್ಚಿಸಲಾಗುತ್ತದೆ.
`ಟೊಯೋಟಾ ಕಂಪನಿ ನೂರಕ್ಕೆ ನೂರರಷ್ಟು ಬಯೋ ಎಥೆನಾಲ್ನಿಂದಲೇ ಚಲಿಸುವ ಕಾರನ್ನು ಪರಿಚಯಿಸುತ್ತಿದೆ. ಕಿರ್ಲೋಸ್ಕರ್ ಕಂಪನಿಯಿAದ ಎಥೆನಾಲ್ನಿಂದ ನಡೆಯುವ ಜನರೇಟರ್ರನ್ನು ತಯಾರಿಸಿದ್ದು, ನನ್ನ ಮನೆಯಲ್ಲಿ ಅದನ್ನು ಅಳವಡಿಸಿದ್ದೇನೆ.
ಬಾವಿಯಲ್ಲಿ ನೀರಿನಲ್ಲಿರುವ ಎಲೆಕ್ಟೊçÃಲೈಜರ್ನ್ನೂ ಇಂಧನವಾಗಿ ಬಳಸಬಹುದು. 5 ಟನ್ ಭತ್ತದ ಹುಲ್ಲು 1 ಟನ್ ಎಥೆನಾಲ್ ಉತ್ಪಾದಿಸಬಹುದು. ಪಂಜಾಬ್ನಲ್ಲಿ ಈಗಾಗಲೇ ಉತ್ಪಾದನೆ ಆರಂಭ ಆಗಿದೆ.
1 ಕಿಲೋ ಗ್ರೀನ್ ಹೈಡ್ರೋಜನ್ 70 ರೂಪಾಯಿಗೆ ಸಿಗಲಿದ್ದು, ಸರಾಸರಿ 400 ಕಿಲೋ ಮೀಟರ್ ಸಂಚರಿಸಬಹುದು. ರೈತರು ಅನ್ನದಾತ ಮಾತ್ರವಲ್ಲ ಇಂಧನ ದಾತರೂ ಆಗಬೇಕು’ ಎಂದು
ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.