ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನುಖರೀದಿಸುವ ಒಪ್ಪಂದವನ್ನು ಕೈಬಿಡುತ್ತಿರುವುದಾಗಿ ಟೆಸ್ಲಾದ ಸಿಇಓ ಇಲಾನ್ ಮಸ್ಕ್ ಅವರು ಶುಕ್ರವಾರ ಹೇಳಿದ್ದಾರೆ.
ನಕಲಿ ಖಾತೆಗಳ ಕುರಿತ ಮಾಹಿತಿಯನ್ನು ನೀಡಲು ಟ್ವಿಟರ್ ವಿಫಲವಾಗಿದೆ. ಈ ಕುರಿತ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ ಎಂದು ಮಸ್ಕ್ ತಿಳಿಸಿದ್ದಾರೆ.
ಟ್ವಿಟರ್ನ ಪ್ರತಿ ಷೇರನ್ನು 54.20 ಡಾಲರ್ಗಳಂತೆ(4,299 ರೂ.) 44 ಶತಕೋಟಿ ಡಾಲರ್ಗೆ (3.49 ಲಕ್ಷ ಕೋಟಿ ರೂ.) ಖರೀದಿಸುವುದಾಗಿ ಮಸ್ಕ್ ಏಪ್ರಿಲ್ನಲ್ಲಿ ತಿಳಿಸಿದ್ದರು. ಮಸ್ಕ್ ನಿರ್ಧಾರದ ಬೆನ್ನಿಗೇ ಟ್ವಿಟರ್ನ ಷೇರುಗಳು ಶೇಕಡ 7ರಷ್ಟು ಕುಸಿತ ಕಂಡಿದ್ದವು.
ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತುಗಳನ್ನು ವೀಕ್ಷಿಸುತ್ತಿರುವ ಬಳಕೆದಾರರ ಪೈಕಿ ನಕಲಿ ಮತ್ತು ಬೋಟ್ ಖಾತೆಗಳು ಶೇ 5ಕ್ಕಿಂತ ಕಡಿಮೆ ಇವೆ ಎಂಬುದನ್ನು ಟ್ವಿಟರ್ ಪುರಾವೆ ಸಹಿತ ತೋರಿಸದೇ ಇದ್ದರೆ ಒಪ್ಪಂದವನ್ನು ಮುರಿಯುವುದಾಗಿ ಮಸ್ಕ್ ಈ ಹಿಂದೆ ಎಚ್ಚರಿಸಿದ್ದರು.
44 ಶತಕೋಟಿ ಡಾಲರ್ಗಳ ಖರೀದಿ ಒಪ್ಪಂದವನ್ನು ಮುಂದುವರಿಸುವಂತೆ ಮಾಡಲು ಎಲಾನ್ ಮಸ್ಕ್ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಟ್ವಿಟರ್ ಆಡಳಿತ ಮಂಡಳಿ ಅಧ್ಯಕ್ಷರು ಶುಕ್ರವಾರ ತಿಳಿಸಿದ್ದಾರೆ.