ಪಕ್ಕದ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಪ್ರವಾಹದಲ್ಲಿ ಕಾರೊಂದು ಕೊಚ್ಚಿಹೋಗಿ ಮೂವರು ಸಾವನ್ನಪ್ಪಿದ್ದಾರೆ.
ನಾಗ್ಪುರ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ.
ಪ್ರವಾಹದ ನಡುವೆಯೂ ಕಾರೊಂದು ಸೇತುವೆ ದಾಟುತ್ತಿದ್ದಾಗ ಕೊಚ್ಚಿಕೊಂಡು ಹೋಗಿದೆ.
ಕಾರಿನಲ್ಲಿ ಆರು ಮಂದಿ ಇದ್ದರು. ಇವರಲ್ಲಿ ಮಹಿಳೆಯೊಬ್ಬರು ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದ ಮೂವರಿಗೆ ಹುಡುಕಾಟ ನಡೆಯುತ್ತಿದೆ.
ಮೃತರನ್ನು ಮಧ್ಯಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ. ನಾಗ್ಪುರದಲ್ಲಿದ್ದ ಮದುವೆ ಕಾರ್ಯಕ್ರಮಕ್ಕೆ ಹಾಜರಾಗಿ ವಾಪಸ್ ತೆರಳುತ್ತಿದ್ದಾಗ ಅವಘಢ ಸಂಭವಿಸಿದೆ.
#नागपूर : सर्वांच्या डोळ्यासमोर स्कार्पियोला जलसमाधी! वाहनात 5 ते 6 लोक असण्याची शक्यता#nagpur #rain pic.twitter.com/d62nF0ABbF
— News18Lokmat (@News18lokmat) July 12, 2022
ಜುಲೈ 1ರಿಂದ ಜುಲೈ 10ರವರೆಗೆ ಮಹಾರಾಷ್ಟ್ರದಲ್ಲಿ ಮಳೆ ವಿಕೋಪದಿಂದ 83 ಮಂದಿ ಸಾವನ್ನಪ್ಪಿದ್ದಾರೆ.