ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಗೆ ಪರಿಷ್ಕೃತ ಪರಿಹಾರ ಮೊತ್ತವನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ.
ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಅತಿವೃಷ್ಟಿಯಿಂದ ನೀರು ನುಗ್ಗಿ ಮನೆಗಳ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆಗಳು ಹಾನಿಯಾದಂತ ಮತ್ತು ಮನೆಗಳು ಹಾನಿಯಾದಂತಹ ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಮಾರ್ಗಸೂಚಿಯಲ್ಲಿ ಸೂಚಿಸಲಾಗಿರುವ ಪರಿಹಾರವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಪ್ರವಾಹದಲ್ಲಿ ಸಂತ್ರಸ್ತರ ಬಟ್ಟೆ ಬರೆಗೆ ಹಾನಿಯಾಗಿದ್ದರೆ ತಕ್ಷಣವೇ ಅವರ ಖಾತೆಗೆ 10 ಸಾವಿರ ರೂಪಾಯಿ ಜಮೆ ಮಾಡುವಂತೆ ಜಿಲ್ಲಾಡಳಿತಕ್ಕೆ ಕಂದಾಯ ಇಲಾಖೆ ಸೂಚಿಸಿದೆ.
ಮಡಿಕೇರಿಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಹಾನಿಗೊಳಗಾದ ಮನೆಯ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ @RAshokaBJP, @karkalasunil, @BCNagesh_bjp, @CCPatilBJP ಮತ್ತು ಇತರರು ಉಪಸ್ಥಿತರಿದ್ದರು. pic.twitter.com/0LW8QEsVsj
— Basavaraj S Bommai (Modi Ka Parivar) (@BSBommai) July 12, 2022