ದೆಹಲಿ ಬಳಿಕ ಪಂಜಾಬ್ನಲ್ಲಿ ಅಧಿಕಾರ ಹಿಡಿದ ಆಮ್ ಆದ್ಮಿ ಪಕ್ಷ ಇದೀಗ ಅದೇ ಜೋಷ್ ನಲ್ಲಿ ಮುಂದಕ್ಕೆ ಹೋಗಲು ಪ್ರಯತ್ನಿಸ್ತಾ ಇದೆ.ಬಿಜೆಪಿಗೆ ಪರ್ಯಾಯ ತಾನೇ ಎಂದು ಹೇಳುತ್ತಿದೆ. ಇತರೆ ರಾಜ್ಯಗಳಿಗೂ ತನ್ನ ನೆಲೆ ವಿಸ್ತರಿಸಿಕೊಳ್ಳುತ್ತಿದೆ. ಇತ್ತೀಚಿಗೆ ಮಧ್ಯಪ್ರದೇಶ ಮುನ್ಸಿಪಲ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬೋಣಿ ಮಾಡಿದೆ. ಸಿಂಗ್ರೌಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ ಆಪ್, 9ಸಾವಿರ ಮೆಜಾರಿಟಿಯೊಂದಿಗೆ ಮೇಯರ್ ಸ್ಥಾನವನ್ನು ಕೈ ವಶ ಮಾಡಿಕೊಂಡಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
2014ರಲ್ಲಿ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ರಾಣಿ ಅಗರ್ವಾಲ್ ಸಿಂಗ್ರೌಲಿ ಮೇಯರ್ ಆಗಿ ಚುನಾಯಿತರಾಗಿದ್ದಾರೆ. 2018ರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ ರಾಣಿ ಅಗರ್ವಾಲ್, ಆಗ ಸೋಲು ಕಂಡಿದ್ದರು. ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಾಣಿ ಅಗರ್ವಾಲ್ ಪರವಾಗಿ ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಂದು ಪ್ರಚಾರ ಮಾಡಿದ್ದರು. ಈಗ ರಾಣಿ ಅಗರ್ವಾಲ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
सिंगरौली की जनता ने मुझे महापौर के रूप में चुना। आपके अपार स्नेह और समर्थन का मैं तहेदिल से धन्यवाद देती हूँ।
आप सभी से मैं वादा करती हूँ कि पूरे जोश और जुनून के साथ दिल्ली मॉडल को अपने सिंगरौली के धरातल में उतारूंगी। आमजन की हर समस्या का समाधान करना ही मेरा लक्ष्य होगा।
— Rani Agrawal (@AAPRaniAgrawal) July 17, 2022
ಮಧ್ಯಪ್ರದೇಶದಲ್ಲಿ ಇಂದೋರ್ ನಂತರ ಅತೀ ದೊಡ್ಡ ಪಾಲಿಕೆ ಸಿಂಗ್ರೌಲಿ ಪಾಲಿಕೆಯೇ ಆಗಿದೆ.
मध्यप्रदेश के सिंगरौली नगर निगम में मेयर पद पर जीत हासिल करने वालीं AAP उम्मीदवार रानी अग्रवाल जी, सभी विजेताओं और कार्यकर्ताओं को बहुत-बहुत बधाई। मेहनत से जनता के लिए काम कीजिए।
देश के हर कोने में अब जनता आम आदमी पार्टी की काम की ईमानदार राजनीति को पसंद कर रही है। https://t.co/tqvXqFzGmi
— Arvind Kejriwal (@ArvindKejriwal) July 17, 2022