ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022 ರ 12 ನೇ ತರಗತಿಯ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು ಪ್ರಕಟಿಸಿದೆ. ಈ ವರ್ಷ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರಮಾಣ ಶೇ. 92.71 ಕ್ಕೆ ತಲುಪಿದೆ.
ವಿದ್ಯಾರ್ಥಿಗಳು ವೆಬ್ಸೈಟ್ಗಳಲ್ಲಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಬಹುದು. ಅಧಿಕೃತ ಅಂತರ್ಜಾಲ ತಾಣಗಳಾದ cbse.gov.in ಮತ್ತು results.cbse.nic.in ಗಳಿಗೆ ಭೇಟಿ ನೀಡಬಹುದಾಗಿದೆ. ಇಲ್ಲಿ ನಿಮ್ಮ ರೋಲ್ ನಂಬರ್ ಬಳಸಿ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಸಿಬಿಎಸ್ಸಿ 12 ನೇ ಅಂತಿಮ ಮಾರ್ಕ್ ಶೀಟ್ ಅನ್ನು 2022 ರ ಅವಧಿ 1 ಮತ್ತು 2 ಪರೀಕ್ಷೆಗಳಲ್ಲಿ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಸ್ಕೋರ್ಕಾರ್ಡ್ ಶೈಕ್ಷಣಿಕ ವರ್ಷದಲ್ಲಿ ಆಂತರಿಕ ಮೌಲ್ಯಮಾಪನ ಅಂಕಗಳು, ಪ್ರಾಜೆಕ್ಟ್ ಕೆಲಸಗಳು, ಪ್ರಾಯೋಗಿಕ ಪರೀಕ್ಷೆಗಳು ಮತ್ತು ಪೂರ್ವ-ಬೋರ್ಡ್ ಪರೀಕ್ಷೆಗಳಂತೆ ಪಡೆದ ಅಂಕಗಳ ವಿವರಗಳನ್ನು ಒಳಗೊಂಡಿದೆ.
ಸಿಬಿಎಸ್ಸಿ ಟರ್ಮ್ 2 ಪರೀಕ್ಷೆಯನ್ನು ಏಪ್ರಿಲ್ 26 ಮತ್ತು ಜೂನ್ 4 ರ ನಡುವೆ ನಡೆಸಲಾಯಿತು. ಸಿಬಿಎಸ್ಸಿ 2021-22 ಶೈಕ್ಷಣಿಕ ಅವಧಿಗೆ ಎರಡು ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸಿತು. ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆದ ಸಿಬಿಎಸ್ಸಿ ಟರ್ಮ್ 1 ಬೋರ್ಡ್ ಪರೀಕ್ಷೆಗಳನ್ನು ಬಹು-ಆಯ್ಕೆಯ ಪ್ರಶ್ನೆಗಳಿಗಾಗಿ ನಡೆಸಲಾಯಿತು. ಆದರೆ, ಟರ್ಮ್ 2 ಪರೀಕ್ಷೆಗಳು ವಿಶ್ಲೇಷಣಾತ್ಮಕ ಮತ್ತು ಕೇಸ್ ಆಧಾರಿತ ಪ್ರಶ್ನೆಗಳನ್ನು ಹೊಂದಿದ್ದವು. ಸಿಬಿಎಸ್ಸಿ ಮಂಡಳಿಯು ಅವಧಿ 1 ರ ಫಲಿತಾಂಶಗಳನ್ನು ಇದುವರೆಗೂ ಪ್ರಕಟಿಸಿರಲಿಲ್ಲ.