68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು ಪ್ರಕಟ ಮಾಡಲಾಗಿದೆ. ‘ಡೊಳ್ಳು’ ಸಿನೆಮಾ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ಸಾಗರ್ ಪುರಾಣಿಕ್ ನಿರ್ದೇಶನದ ಹಾಗೂ ಪವನ ಒಡೆಯರ್ ನಿರ್ದೇಶನದ ‘ಡೊಳ್ಳು’ ಸಿನೆಮಾಗೆ ಈಗಾಗಲೇ ಹಲವು ಪ್ರಶಸ್ತಿಗಳು ಒಲಿದುಬಂದಿವೆ. ದಾದಾ ಸಾಹೇಬ್ ಫಾಲ್ಕೆ ಪೆಸ್ಟಿವಲ್ ನ ಅತ್ಯುತ್ತಮ ಪ್ರಶಸ್ತಿ ಹಾಗೂ ಕ್ಯಾಲಿಡೋಸ್ಕೋಪ್ ಭಾರತೀಯ ಚಲನಚಿತ್ರೋತ್ಸವ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಪಡೆದುಕೊಂಡಿದೆ.
ಇದೀಗ, 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ, ಕನ್ನಡದ ಅತ್ಯುತ್ತಮ ಚಿತ್ರವಾಗಿ ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ ಚಿತ್ರ ಪಾತ್ರವಾಗಿದೆ.
ಈ ಚಿತ್ರವನ್ನು ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್ ಅವರ ನಿರ್ಮಾಣ ಸಂಸ್ಥೆ ಒಡೆಯರ್ ಮೂವೀಸ್ ಸಂಸ್ಥೆ ನಿರ್ಮಾಣ ಮಾಡಿದೆ. ಸಾಗರ್ ಪುರಾಣಿಕ್ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಶ್ರೀನಿಧಿ ಡಿಎಸ್ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ.
ನಿಧಿ ಹೆಗ್ಡೆ, ಬಾಬು ಹಿರಣ್ಣಯ್ಯ, ಕಾರ್ತಿಕ್ ಮಹೇಶ್, ಚಂದ್ರ ಮಯೂರ ಮತ್ತು ಶರಣ್ಯ ಸುರೇಶ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.