ಅಪ್ಪು ಸಾಧನೆಯನ್ನು ಪಠ್ಯಕ್ಕೆ ಸೇರಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಮೈಸೂರು ಜಿಲ್ಲೆಯ ನರಸೀಪುರ ತಾಲೂಕು ಮುಡುಕುತೊರೆ ಗ್ರಾಮದ ನಟ ಪುನೀತ್ ರಾಜ್ಕುಮಾರ್ ಅಭಿಮಾನಿ ದೇವರಾಜ ಅರಸು ಎಂಬುವವರು ಅಪ್ಪು ಸಾಧನೆಯನ್ನು ಪಠ್ಯಕ್ಕೆ ಸೇರಿಸಿ ಎಂದು ಹಲವಾರು ತಿಂಗಳಿಂದ ವಿಶೇಷ ಅಭಿಯಾನ ನಡೆಸುತ್ತಿದ್ದರು. ಇತ್ತೀಚೆಗೆ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಇದೀಗ ಪುನೀತ್ ಅಭಿಮಾನಿ ದೇವರಾಜ ಅರಸು ಮನವಿ ಆಧರಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಪುನೀತ್ ರಾಜ್ಕುಮಾರ್ ಅಪ್ರತಿಮ ಬಾಲ ಕಲಾವಿದರಾಗಿದ್ದರು. ಅವರ ಸಾಧನೆಯನ್ನು ಕನ್ನಡ ಪಠ್ಯಪುಸ್ತಕಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ. ದೇವರಾಜ ಅರಸು ಅಪ್ಪು ನಿಧನದ ಬಳಿಕ ನಿರಂತರ ಅಭಿಯಾನ ಮಾಡುತ್ತಿದ್ದರು. ಅಭಿಯಾನದ ಮೂಲಕ ರಾಜ್ಯಸರ್ಕಾರದ ಗಮನ ಸೆಳೆಯುವ ಯತ್ನ ಮಾಡಿದ್ದರು.