ಮಹಾರಾಷ್ಟ್ರದ ಪುಣೆ (pune) ಜಿಲ್ಲೆಯ ಇಂದಾಪುರ(Indapur) ತಾಲೂಕಿನ ಕದಂಬನವಾಡಿ (Kadbanwadi) ಗ್ರಾಮದ ಕೃಷಿ ಭೂಮಿಯಲ್ಲಿ ತರಬೇತಿ ವಿಮಾನವೊಂದು ಪತನಗೊಂಡಿದೆ(trainee aircraft crashed). ಈ ದುರ್ಘಟನೆಯಲ್ಲಿ 22 ವರ್ಷದ ಒಬ್ಬ ತರಬೇತಿ ನಿರತ ಮಹಿಳಾ ಪೈಲಟ್ಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಕದಂಬನವಾಡಿ ಗ್ರಾಮದ ಕೃಷಿ ಭೂಮಿಯಲ್ಲಿ ಇಂದು ಬೆಳಿಗ್ಗೆ 11-30 ರ ಸುಮಾರಿಗೆ ವಿಮಾನ ಪತನವಾಗಿದೆ. 22 ವರ್ಷದ ತರಬೇತಿ ನಿರತ ಮಹಿಳಾ ಪೈಲಟ್ ಭವಿಕಾ ರಾತೋಡ್ ಅವರಿಗೆ ಗಾಯಗಳಾಗಿವೆ.
ಪತನವಾದ ವಿಮಾನ ಬಾರಾಮತಿಯಲ್ಲಿರುವ ಕಾರ್ವೆರ್ ಏವಿಯೇಷನ್ ಪೈಲಟ್ ತರಬೇತಿ ಸಂಸ್ಥೆಗೆ ಸೇರಿದ್ದಾಗಿದೆ. ಘಟನ ಸ್ಥಳಕ್ಕೆ ಈ ಸಂಸ್ಥೆಯ ಸಿಬ್ಬಂದಿಗಳು ತಲುಪಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
#WATCH | Maharashtra: A trainee aircraft crashed in a farm in Kadbanwadi village of Indapur taluka in Pune district today around 11.30am. 22-yr-old trainee pilot, Bhavika Rathod injured. Aircraft belongs to Carver Aviation, Baramati. Its staff present at spot. Investigation is on pic.twitter.com/Z895LQAXn2
— ANI (@ANI) July 25, 2022
ಇದೇ ಜುಲೈ 16 ರಂದು ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಪತನವಾಗಿತ್ತು. ಈ ದುರ್ಘಟನೆಯಲ್ಲಿ ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದರು. ಈ ತಿಂಗಳ ಆರಂಭದಲ್ಲಿ ಒಡಿಶಾದಲ್ಲಿ ತರಬೇತಿ ವಿಮಾನ ಪತನಗೊಂಡಿತ್ತು. ಇದರಲ್ಲಿ ಪೈಲಟ್ ಗಳು ಸಾವನ್ನಪ್ಪಿದ್ದರು. ಆಂಧ್ರಪ್ರದೇಶದ ನೆಲಗೊಂಡದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು.