ADVERTISEMENT
ಮೂಡುಬಿದಿರೆಯ ಪ್ರಪ್ರಥಮ ನೋಟರಿ , ಜೈನ ಸಮಾಜದ ಸಂಘಟಕ, ಅಡ್ವೋಕೇಟ್ ಚೇತನ್ ವರ್ಮ ಅವರು ಇಂದು ಸಂಜೆ ನಿಧನರಾಗಿದ್ದಾರೆ.
ಶ್ರೀಯುತರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.
ಚೇತನ್ ವರ್ಮ ಅವರು ಸರಳ ಸ್ವಭಾವ ಮತ್ತು ಸದಾ ನಗುಮುಖದವರಾಗಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಜೈನ ಧರ್ಮದ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ಚೇತನ್ ವರ್ಮಾ ಅವರ ನಿಧನ ಜೈನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮೂಡುಬಿದಿರೆ ಜೈನ ಸಮಾಜ ಕಂಬನಿ ಸುರಿಸಿದೆ.
ADVERTISEMENT