ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಇತ್ತೀಚೆಗೆ ಬಡೆದ ಫಾಝಿಲ್ ಹತ್ಯೆ ಸಂಬಂಧ ಪೊಲೀಸರು ಮತ್ತೆ ಆರು ಜನರನ್ನು ಬಂಧಿಸಿದ್ದಾರೆ.
ಸುಹಾಸ್ ಶೆಟ್ಟಿ, ಮೊಹನ್, ಗಿರಿಧರ್, ಅಭಿಷೇಕ್, ಶ್ರೀನುವಾಸ್, ದೀಕ್ಷಿತ್ ಬಂಧಿತ ಆರೋಪಿಗಳು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದರು.
ಕೊಲೆ ನಡೆಸಲು ಆರೋಪಿಗಳು ಬಳಸಿದ್ದರು ಎನ್ನಲಾದ ಕಾರಿನ ಮಾಲೀಕ ಅಜಿತ್ ಕ್ರಾಸ್ತನನ್ನು ಪೊಲೀಸರು ಭಾನುವಾರ ಬಂಧಿಸಿದ್ದರು. ಬಳಿಕ ಕಾರು ಉಡುಪಿ ಜಿಲ್ಲೆಯ ಇನ್ನಾ ಗ್ರಾಮದ ಕಡೆಕುಂಜದಲ್ಲಿ ಭಾನುವಾರ ಪತ್ತೆಯಾಗಿತ್ತು. ಅಜಿತ್ ಕ್ರಾಸ್ತಾ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಜುಲೈ 28 ರಂದು ಸಿಎಂ ಮಂಗಳೂರಿನಲ್ಲಿದ್ದ ವೇಳೆಯೇ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಫಾಝಿಲ್ ಹತ್ಯೆ ನಡೆಸಿದ್ದರು. ಮುಸುಕು ಧರಿಸಿದ್ದ ಆರಫಿಗಳು ಫಾಝಿಲ್ ಹತ್ಯೆ ಮಾಡಿದ್ದ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿತ್ತು.