No Result
View All Result
ಕೈಮಗ್ಗ ಮತ್ತು ಜವಳಿ ಇಲಾಖೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಇಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “8ನೇ ಅಂತರಾಷ್ಟ್ರೀಯ ಕೈಮಗ್ಗಕ್ಕೆ ಶುಭಾಶಯ ಕೊರುತ್ತಾ ಕೈಮಗ್ಗ ಅಂದ್ರೆ ಸ್ವಾವಲಂಬನೆ ಸಂಕೇತ ಇದು ಸ್ವತಂತ್ರ ಹೋರಾಟದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ ಹಾಗೂ ಕೈಮಗ್ಗದ ಚರಕದ ಬಗ್ಗೆ ಮಹತ್ವವನ್ನ ತಿಳಿಸಿದ ಮಹಾತ್ಮ ಗಾಂಧಿಯವರು ನಮ್ಮ ಬಟ್ಟೆಯನ್ನ ನಾವೇ ತಯಾರು ಮಾಡುಬೇಕೆಂದು ಕರೆ ಕೊಟ್ಟವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಆತ್ಮ ನಿರ್ಭರ್ ಭಾರತ್ ಎಂದು ಕರೆ ಕೊಟ್ಟಿತ್ತು ಇದರಲ್ಲಿ ಕೈಮಗ್ಗ ಒಂದು ಕೂಡ, ಇದು ನೇಕಾರರು ಕೂಲಿಕಾರರು ಲಾಭಗಳಿಸುವ ಉದ್ದೇಶಕ್ಕೆ ಇಂದು ಮೇಳವನ್ನ ಆಯೋಜಿಸಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿಯನ್ನ ಕೂಡ ಕೊಡ್ತಾ ಇದ್ದೇವೆ ಹಾಗೂ ಅನೇಕ ಯೋಜನೆಗಳನ್ನ ಕೈಮಗ್ಗಕ್ಕೆ ಮೀಸಲಿಟ್ಟಿದ್ದೇವೆ ಈ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಕೊಡುತ್ತದೆ ” ಎಂದರು.
ಇಂದಿನಿಂದ ಆ.7 ರವರೆಗೆ ನಡೆಯಲಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಸಹಕಾರ ಸಂಘ-ಸಂಸ್ಥೆಗಳು ಭಾಗವಹಿಸಿದ್ದು, ಮಳಿಗೆಗಳು ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ತೆರೆದಿರಲಿವೆ.
ಅಲ್ಲದೆ, ಆ.7ರಂದು ಬೆಳಗ್ಗೆ 11.30ಕ್ಕೆ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ನೇಕಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾನ್ಯ ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶ್ರೀ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಅವರು ಉದ್ಘಾಟಿಸಲಿದ್ದಾರೆ.
ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ (ಕೆ.ಎಚ್.ಡಿ.ಸಿ.)ದ ರೇಷ್ಮೆ ಸೀರೆಗಳು, ಕಾಟನ್ ಬೆಡ್ ಶೀಟ್, ಟವೆಲ್, ಲುಂಗಿ; ತುಮಕೂರು, ಚಿತ್ರದುರ್ಗ, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರದ ರೇಷ್ಮೆ ಸೀರೆಗಳು; ದಾವಣಗೆರೆಯ ಟವೆಲ್, ಲುಂಗಿ, ಕರವಸ್ತ್ರ, ಬೆಡ್ಶೀಟ್; ಶಿವಮೊಗ್ಗದ ಕಾಟನ್ ಶರ್ಟ್, ಕಾಟನ್ ಕೋಟ್, ಕುರ್ತಾ, ಮಕ್ಕಳ ಉಡುಗೆ, ಸೀರೆ; ಚಿಕ್ಕಮಗಳೂರು, ಹಾವೇರಿಯ ಕರ್ಚೀಫ್ ಸಹಿತ ಇತರ ಉತ್ಪನ್ನಗಳು ಇವೆ.
ಅಲ್ಲದೆ, ಉಡುಪಿ ಸೀರೆ; ಬೀದರ್ ನ ರಗ್ಗು; ಕಲಬುರಗಿಯ ಶಾಲು, ಕಂಬಳಿ; ಬಳ್ಳಾರಿಯ ಕಸೂತಿ ಉತ್ಪನ್ನಗಳು; ಧಾರವಾಡದ ಜಮಖಾನ; ಬೆಳಗಾವಿಯ ಸೀರೆ, ಧೋತಿ, ದುಪಟ್ಟಾ, ನ್ಯಾಪ್ಕಿನ್; ಗದಗದ ಪಟ್ಟೆದಂಚು ಸೀರೆ, ಗಾಡಿಧಡಿ ಕಾಟನ್ ಸೀರೆ, ಗೋಮಿಧಡಿ ಸೀರೆ, ಚಿಕ್ಕಿಫರಾಸ್ ಕಾಟನ್ ಸೀರೆ; ವಿಜಯಪುರದ ಜಾಕೆಟ್; ಹಾಗೂ ಬಾಗಲಕೋಟೆಯ ಗುಳೇದಗುಡ್ಡ ಖಣ ಬಟ್ಟೆ, ಖಣ ನೋಟ್ ಬುಕ್, ಖಣ ಶಾಲು, ಇಲಕಲ್ಲ ಸೀರೆಗಳು ದೊರೆಯುತ್ತವೆ.
ಕೈಮಗ್ಗ ಮತ್ತು ಜವಳಿ ಇಲಾಖೆ: 2021ರ ಜುಲೈ-2022ರ ಜೂನ್ ಅಂತ್ಯದವರೆಗಿನ ಸಾಧನೆ:-
• ನೇಕಾರ ಸಮ್ಮಾನ್ ಯೋಜನೆ:- 2021-22 ನೇ ಸಾಲಿಗೆ 49,544 ಕೈಮಗ್ಗ ನೇಕಾರರಿಗೆ ನೇರ ನಗದು ವರ್ಗಾವಣೆ (DBT) ಮುಖಾಂತರ ಪ್ರತಿ ನೇಕಾರರಿಗೆ do.2,000/- 03 2.990.88 ಲಕ್ಷ ರೂ.ಗಳ ವಾರ್ಷಿಕ ಆರ್ಥಿಕ ನೆರವನ್ನು ಕೈಮಗ್ಗ ನೇಕಾರರಿಗೆ ನೀಡಲಾಗಿರುತ್ತದೆ.
• ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ:- ರಾಜ್ಯದ ಕೈಮಗ್ಗ ನೇಕಾರರ ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಹಾಗೂ ಬೆಂಬಲ ನೀಡಲು ರೇಷ್ಮೆ, ಹತ್ತಿ ಮತ್ತು ಉಣ್ಣೆ ಕೈಮಗ್ಗ ವಲಯದಲ್ಲಿ ಹೊಂದಿರುವ ನೈಪುಣ್ಯತೆ / ಶ್ರೇಷ್ಠತೆ / ತಾಂತ್ರಿಕತೆ/ ಉತ್ಕೃಷ್ಠತೆಗಾಗಿ ದಿನಾಂಕ:07.08.2021 ರ 7ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ದಿನದಂದು ಕೈಮಗ್ಗ ನೇಕಾರರಿಗೆ ನಗದು ಬಹುಮಾನ. ಒಂದು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಂತೆ, ರೇಷ್ಮೆ ಕ್ಷೇತ್ರದಿಂದ ಪ್ರಥಮ, ದ್ವಿತೀಯ, ಹತ್ತಿ ಕ್ಷೇತ್ರದಿಂದ ಪ್ರಥಮ, ದ್ವಿತೀಯ ಹಾಗೂ ಉಣ್ಣೆ ಕ್ಷೇತ್ರದಿಂದ ಪ್ರಥಮ ಪ್ರಶಸ್ತಿಗಳನ್ನು ಕೈಮಗ್ಗ ನೇಕಾರರಿಗೆ 2021 ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿರುತ್ತದೆ.
• ಮಿತವ್ಯಯ ನಿಧಿ ಯೋಜನೆ:- ಯೋಜನೆಯ ಬಾಲ್ಕು ರೂ.200.00 ಲಕ್ಷಗಳನ್ನು 118 ಕೈಮಗ್ಗ ನೇಕಾರರ ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಲಾಗಿದೆ.
• ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಸಹಾಯ (ಶೇಕಡ 20% ರಿಬೇಟ್):- ಕೈಮಗ್ಗ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ 77 ಕೈಮಗ್ಗ ಸಹಕಾರ ಸಂಘಗಳಿಗೆ ಶೇ.20 ರಂತೆ ರಿಬೇಟ್ ಸೌಲಭ್ಯ ಒದಗಿಸಲಾಗಿದೆ ಹಾಗೂ ಇದರಡಿ ರೂ.450.00 ಲಕ್ಷ ರೂ.ಗಳ ಅನುದಾನವನ್ನು ವೆಚ್ಚ ಮಾಡಲಾಗಿದೆ.
• ಸಹಕಾರ ಸಂಘಗಳಿಂದ ಮಂಜೂರಾದ 1% ಮತ್ತು 3% ಸಾಲದ ಮೇಲಿನ ಬಡ್ಡಿ ಸಹಾಯಧನ:- ಬ್ಯಾಂಕ್ಗಳು @ 1% ಬಡ್ಡಿ ದರದಲ್ಲಿ ನೇಕಾರರು ಪಡೆದ ರೂ.2.00 ಲಕ್ಷಗಳವರೆಗಿನ ಸಾಲದ ಮೇಲೆ ಬಡ್ಡಿ ಸಹಾಯಧನವನ್ನು ನೀಡುತ್ತಿವೆ ಮತ್ತು ರೂ. 2.00 ಲಕ್ಷದಿಂದ ರೂ. 5.00 ಲಕ್ಷ @ 3% ಬಡ್ಡಿ, 26 ಸಹಕಾರಿ ಬ್ಯಾಂಕುಗಳು / ಸಂಘಗಳು ಮತ್ತು ರೂ.134.76 ಲಕ್ಷಗಳನ್ನು ಈ ಉದ್ದೇಶಕ್ಕಾಗಿ ಖರ್ಚು ಮಾಡಲಾಗಿದೆ.
• ಅಮೃತ ನೇಕಾರರ ಉತ್ಪಾದಕರ ಮೂಲ:- 30 ಅಮೃತ್ ನೇಕಾರರ ಉತ್ಪಾದಕ ಮೂಲದ ಗುರಿಯನ್ನು 2021-22 ವರ್ಷಕ್ಕೆ ಹೊಂದಿಸಲಾಗುವುದು. ಅದರಂತೆ 11 ಜಿಲ್ಲೆಗಳಲ್ಲಿ 8 ಕೈಮಗ್ಗ ಮತ್ತು 22 ಪವರ್ ಅಮೃತ್ ನೇಕಾರರ ಉತ್ಪಾದಕ ಮೂಲವನ್ನು ಸ್ಥಾಪಿಸಲಾಗಿದೆ. 2021-22 ರಲ್ಲಿ ಒಟ್ಟು ರೂ.156.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
• ಕೋವಿಡ್-19 2ನೇ ಅಲೆಯ ಪ್ರಯುಕ್ತ ವಿದ್ಯುತ್ ಮಗ್ಗ ನೇಕಾರರಿಗೆ ರೂ.3000/- ಗಳ ಪರಿಹಾರಧನ dinezdoba 85718 ನೇಕಾರರಿಗೆ ರೂ.2517.54 ಲಕ್ಷಗಳನ್ನು ನೇರ ಮುಖಾಂತರ ಪರಿಹಾರಧನ ವರ್ಗಾಯಿಸಲಾಗಿರುತ್ತದೆ.
• 02 ವಿದ್ಯುತ್ ಮಗ್ಗ ಖರೀದಿ ಹಾಗೂ ಎಲೆಕ್ಟ್ರಾನಿಕ್ ಜಕಾರ್ಡ್ಗಳ ಖರೀದಿ ಯೋಜನೆ:- 165 ಸಾಮಾನ್ಯ ಫಲಾನುಭವಿಗಳಿಗೆ ರೂ.311.60 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
• ನೇಕಾರರ ಪ್ಯಾಕೇಜ್ SCSP/TSP:- 2 ಪವರ್ ಲೂಮ್, ಎಲೆಕ್ಟ್ರಾನಿಕ್ ಜಕಾರ್ಡ್ಗಳ ಖರೀದಿ ಯೋಜನೆ ಮತ್ತು ಇತರ ಕೈಮಗ್ಗ ಯೋಜನೆಗಳ ಅಡಿಯಲ್ಲಿ 246 SCSP/TSP ಫಲಾನುಭವಿಗಳಿಗೆ ರೂ.473.60 ಲಕ್ಷಗಳ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ.
• 1 ರಿಂದ 20 ಹೆಚ್.ಪಿವರೆಗಿನ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ವಿದ್ಯುತ್ ಸಬ್ಸಿಡಿ ಯೋಜನೆಯಡಿ ರೂ.7317.29 ಲಕ್ಷಗಳನ್ನು ವಿದ್ಯುತ್ ಸಬ್ಸಿಡಿಯಾಗಿ ESCOMS ಗಳಿಗೆ ಬಿಡುಗಡೆ ಮಾಡಲಾಗಿದೆ.
• 50% ಸಬ್ಸಿಡಿ ಯೋಜನೆಯಡಿ ರೇಪಿಯ ಲೂಮ್ ಘಟಕಗಳಿಗೆ ರೂ.15.00 ಲಕ್ಷಗಳ ವಿದ್ಯುತ್ ಸಬ್ಸಿಡಿಯನ್ನು ಒದಗಿಸಲಾಗಿದೆ.
• 5 ಸಹಕಾರಿ ನೂಲುವ ಗಿರಣಿಗಳಿಗೆ ರೂ.350.00 ಲಕ್ಷಗಳ ವಿದ್ಯುತ್ ಸಬ್ಸಿಡಿಯನ್ನು ಒದಗಿಸಲಾಗಿದೆ.
• SCSP/TSP SME ಜವಳಿ ಘಟಕ ಸ್ಥಾಪನೆ ಯೋಜನೆ (2851-00-103-0-72):- ಸದರಿ ಯೋಜನೆಯಡಿ 53 SCSP SME ಜವಳಿ ಘಟಕಗಳಿಗೆ ರೂ.4257.00 ಲಕ್ಷಗಳು ಹಾಗೂ 24 TSP SME ಘಟಕ. ರೂ.623.03 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
• ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿ:- 2021-22 ನೇ ಸಾಲಿನಲ್ಲಿ ಸರ್ಕಾರದಿಂದ ರೂ.15236.00 ಲಕ್ಷಗಳನ್ನು ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿರುತ್ತದೆ. ಸದರಿ ಅನುದಾನದಲ್ಲಿ ಪ್ರೋತ್ಸಾಹಧನ ಮತ್ತು ರಿಯಾಯಿತಿಯಾಗಿ 137 MSME ಜವಳಿ ಘಟಕಗಳು, 02 ಮೆಗಾ ಪ್ರಾಜೆಕ್ಟ್ಗಳು 01 ಜವಳಿ ಪಾರ್ಕ್ ಮತ್ತು 4790 ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ ತರಬೇತಿ ನೀಡಲು ವೆಚ್ಚ ಮಾಡಲಾಗಿರುತ್ತದೆ.
• SCSP ಮತ್ತು TSP ಕಾರ್ಯಕ್ರಮದ ಅಡಿಯಲ್ಲಿ ರೂ. 2284.05 ಲಕ್ಷಗಳು ಮತ್ತು ರೂ.80.22 ಲಕ್ಷಗಳನ್ನು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕಾಗಿ ನಿಗದಿಪಡಿಸಿ, ಬಿಡುಗಡೆ ಮಾಡಲಾಗಿದೆ. ಅದರಲ್ಲಿ 2,151 ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ರೂ.219.73 ಲಕ್ಷಗಳನ್ನು ಮತ್ತು 747 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮಕ್ಕಾಗಿ 77.85 ಲಕ್ಷಗಳನ್ನು ಬಳಸಿಕೊಳ್ಳಲಾಗಿದೆ.
• ಆಯವ್ಯಯ ಘೋಷಣೆಗೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರ ಹೋಬಳಿಯ ಖುರ್ಸಾಪುರ ಗ್ರಾಮದ ಸರ್ವೆ ನಂ.43 ರಲ್ಲಿನ 59 ಎಕರೆ 34 ಗುಂಟೆ ಜಮೀನಿನಲ್ಲಿ Government Lead Anchor Promoter ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಿ, ಆಂಕರ್ ಪ್ರವರ್ತಕರಾದ ಮೆ|| ಟೆಕ್ಸ್ಸ್ಪೋರ್ಟ್ ಇಂಡಸ್ಟ್ರೀಸ್ ಪ್ರೈ. ಲಿ., ರೂ.45.00 ಕೋಟಿಗಳ ವೆಚ್ಚದಲ್ಲಿ ಸಿದ್ಧ ಉಡುಪು ಘಟಕವನ್ನು ಸ್ಥಾಪಿಸಿ ಅಂದಾಜು 3000 ಉದ್ಯೋಗಗಳನ್ನು ಸೃಜಿಸಲು ಕ್ರಮವಹಿಸಲಾಗಿದೆ. ಮೊದಲನೇ ಹಂತದ ಮೂಲಭೂತ ಸೌಕರ್ಯ ಕಾಮಗಾರಿಯನ್ನು ರೂ.25.00 ಕೋಟಿಗಳಿಗೆ ಅನುಮೋದನೆ ನೀಡಿ ಅನುಮೋದಿತ ಮೊತ್ತದಲ್ಲಿ 2021-22 ನೇ ಸಾಲಿನಲ್ಲಿ ರೂ.10.00 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿ ವೆಚ್ಚ ಮಾಡಲಾಗಿರುತ್ತದೆ.
No Result
View All Result
error: Content is protected !!