ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 2022 ರ 10 ಕಿ.ಮೀ ಮಹಿಳಾ ಓಟದ ವಿಭಾಗದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಪದಕ ದೊರೆತಿದೆ.
ಭಾರತದ ಅಥ್ಲೀಟ್ ಪ್ರಿಯಾಂಕಾ ಗೋಸ್ವಾಮಿ ಮಹಿಳೆಯರ 10 ಸಾವಿರ ಮೀಟರ್ ಓಟದ ನಡಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಪ್ರಿಯಾಂಕಾ 49:38.82 ರಲ್ಲಿ 10 ಕಿ.ಮೀ ಓಟವನ್ನು ಪೂರ್ಣಗೊಳಿಸಿದರು. ಈ ಗೆಲುವಿನೊಂದಿಗೆ ಪ್ರಿಯಾಂಕಾ ಗೋಸ್ವಾಮಿ ಇತಿಹಾಸ ಸೃಷ್ಟಿಸಿದ್ದು,10 ಕಿ.ಮೀ ಓಟ ವಿಭಾಗದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನು, ಬಾಕ್ಸಿಂಗ್ನಲ್ಲಿ ಭಾರತದ ಇಬ್ಬರು ಕುಸ್ತಿಪಟುಗಳಾದ ವಿಘ್ನೇಶ್ ಪೊಗಾಟ್ ಮತ್ತು ಅಮಿತ್ ಪಂಗಲ್ ಪೈನಲ್ ಹಂತಕ್ಕೆ ತಲುಪಿದ್ದಾರೆ.