ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಐದು ವರ್ಷಗಳ ಬಿಜೆಪಿ-ಜೆಡಿಯು ಮೈತ್ರಿ ಮುರಿದುಬಿದ್ದಿದೆ.
ಜೆಡಿಯು-ಆರ್ಜೆಡಿ-ಕಾಂಗ್ರೆಸ್-ಎಡಪಕ್ಷಗಳ ಮಹಾಮೈತ್ರಿಕೂಟ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲು ಹಾದಿಸುಗಮವಾಗಿದೆ.
ಐದು ವರ್ಷಗಳ ಬಳಿಕ ನಿತೀಶ್ ಕುಮಾರ್ ಮತ್ತೆ ಮಹಾಮೈತ್ರಿಕೂಟಕ್ಕೆ ಬಂದಿದ್ದಾರೆ.
ಆರ್ಜೆಡಿ ನಾಯಕ ತೇಜಸ್ವಿಯಾದವ್ ಅವರು ಉಪ ಮುಖ್ಯಮಂತ್ರಿ ಆಗಲಿದ್ದಾರೆ. ಆರ್ಜೆಡಿ ಶಾಸಕರಲ್ಲೇ ಒಬ್ಬರು ವಿಧಾನಸಭಾ ಸ್ಪೀಕರ್ ಆಗುವ ನಿರೀಕ್ಷೆ ಇದೆ.
ADVERTISEMENT
ADVERTISEMENT