ಬಿಹಾರದ ಹೊಸ ಮುಖ್ಯಮಂತ್ರಿಯಾಗಿ ನಾಳೆ ಮತ್ತೆ ನಿತೀಶ್ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಾಳೆ ಮಧ್ಯಾಹ್ನ 2 ಗಂಟೆಗೆ ರಾಜಧಾನಿ ಪಾಟ್ನಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ಆರ್ಜೆಡಿ ನಾಯಕ ತೇಜಸ್ವಿಯಾದವ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ಮೈತ್ರಿಕೂಟ ಮುರಿದುಕೊಂಡಿರುವ ನಿತೀಶ್ ಕುಮಾರ್ ಅವರು ಇವತ್ತು ರಾಜ್ಯಪಾಲರನ್ನು ಭೇಟಿ ಆಗಿ 164 ಶಾಸಕರ ಬೆಂಬಲದ ಪತ್ರವನ್ನು ಸಲ್ಲಿಸಿದರು.
243 ಶಾಸಕರಿರುವ ವಿಧಾನಸಭೆಯಲ್ಲಿ ಜೆಡಿಯು – 45, ಆರ್ಜೆಡಿ – 90 ಮತ್ತು ಕಾಂಗ್ರೆಸ್ – 19 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಿರುವುದು 127 ಶಾಸಕರ ಬೆಂಬಲ. ಬಿಜೆಪಿ -77, ಎಡಪಕ್ಷಗಳು – 16, ಇತರೆ – ಆರು ಮಂದಿ ಶಾಸಕರಿದ್ದಾರೆ.
2000ರಲ್ಲಿ ಕೇವಲ 7 ದಿನದ ಮಟ್ಟಿಗೆ ಸಿಎಂ ಆಗಿದ್ದ ನಿತೀಶ್ ಕುಮಾರ್ ಅವರು ಆ ಬಳಿಕ 2005ರಿಂದ ನಿರಂತರವಾಗಿ ಇಲ್ಲಿಯವರೆಗೂ ಸಿಎಂ ಆಗಿದ್ದಾರೆ.