ಜಗತ್ತಿನ ದೈತ್ಯ ಉದ್ಯಮಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಅವರು ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಲ್ಸಾದಲ್ಲಿ 6.92 ಅಮೆರಿಕನ್ ಡಾಲರ್ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಆಗಸ್ಟ್ 5ರಂದು 7.92 ಮಿಲಿಯನ್ನ್ನಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ.
51 ವರ್ಷದ ಮಸ್ಕ್ ಅವರು ಕಳೆದ 10 ತಿಂಗಳ ಅವಧಿಯಲ್ಲಿ 32 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಟೆಲ್ಸಾ ಷೇರುಗಳ ಮೌಲ್ಯ ಶೇಕಡಾ 35ರಷ್ಟು ಹೆಚ್ಚಳ ಆಗಿದೆ.
ಇನ್ಮುಂದೆ ಟೆಲ್ಸಾ ಕಂಪನಿಯ ಷೇರುಗಳನ್ನು ಮಾರಾಟ ಮಾಡಲ್ಲ ಎಂದು ಈ ಹಿಂದೆ ಎಲಾನ್ ಮಸ್ಕ್ ಅವರು ಹೇಳಿದ್ದರು.