ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ವ್ಯಾಪಾರದ ಅಂತರ ಮೇ-ಜೂನ್ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಳ ಆಗಿದೆ.
ಯುಎಇ ಜೊತೆಗೆ ಭಾರತ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದ ಜಾರಿ ಆದ ಎರಡೇ ತಿಂಗಳಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ಅಂತರ 4 ಪಟ್ಟು ಹೆಚ್ಚಳ ಆಗಿದೆ.
ಭಾರತಕ್ಕೆ ಯುಎಇಯಿಂದ ಆಮದಾಗುತ್ತಿರುವ ಕಚ್ಚಾತೈಲ ಮತ್ತು ಚಿನ್ನದ ಆಮದು ಹೆಚ್ಚಳ ಆಗಿದೆ.
ಯುಎಇ ಜೊತೆಗೆ ಭಾರತದ ವ್ಯಾಪಾರ ಕೊರತೆ ಕಳೆದ ವರ್ಷದ 980 ದಶಲಕ್ಷ ಅಮೆರಿಕನ್ ಡಾಲರ್ಗೆ ಹೋಲಿಸಿದ್ರೆ ಜೂನ್ ಅಂತ್ಯಕ್ಕೆ 3.92 ಶತಕೋಟಿ ಅಮೆರಿಕನ್ ಡಾಲರ್ ಹೆಚ್ಚಳ ಆಗಿದೆ.
ಯುಎಇಗೆ ಭಾರತದ ರಫ್ತು ಶೇಕಡಾ 17.5ರಷ್ಷು ಹೆಚ್ಚಳವಾಗಿದ್ದರೆ, ಭಾರತಕ್ಕೆ ಯುಎಇ ಆಮದು ಶೇಕಡಾ 67ರಷ್ಟು ಹೆಚ್ಚಳ ಆಗಿದೆ. ಕಚ್ಚಾತೈಲ ಆಮದು ಮತ್ತು ಕಚ್ಚಾತೈಲದ ಬೆಲೆ ಹೆಚ್ಚಳವೇ ಈ ವ್ಯಾಪಾರಿ ಕೊರತೆಗೆ ಮುಖ್ಯ ಕಾರಣ.
ಯುಎಇಗೆ ಭಾರತ ಸಿದ್ಧಪಡಿಸಿದ ಉಡುಪುಗಳು, ಆಭರಣ, ಯಂತ್ರೋಪಕರಣ, ಪಾದರಕ್ಷೆ ಮತ್ತು ಆಟೋಮೊಬೈಲ್ಸ್ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.