ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysuru Dasara) ಸಿದ್ಧತೆ ಶುರುವಾಗಿದೆ. ನಾಡಹಬ್ಬದಲ್ಲಿ ಹೆಜ್ಜೆ ಹಾಕುವ ಆನೆಗಳ ತೂಕವನ್ನು ಲೆಕ್ಕ ಹಾಕಲಾಗಿದೆ.
ರತ್ನ ಖಚಿತ ಅಂಬಾರಿ ಹೊರುವ ನಾಯಕ ಅಭಿಮನ್ಯು ಆನೆ (Abhimanyu) 4,770 ಕೆಜಿ ತೂಕವಿದ್ದಾನೆ.
ದಸರಾ ಆನೆಗಳಲ್ಲಿ ಅರ್ಜುನನೇ ಬುಲಭಾರ. ಇವನ ತೂಕ ಬರೋಬ್ಬರೀ 5,660 ಕೆಜಿ.
ಗೋಪಾಲಸ್ವಾಮಿ ಆನೆ 5,140 ಕೆಜಿ ತೂಕ, ಧನಂಜಯ ಆನೆ 4,810 ಕೆಜಿ ತೂಕವಿದೆ.
ಭೀಮ ಆನೆಯ ತೂಕ 3,920 ಕೆಜಿ, ಹೆಣ್ಣಾನೆಗಳಾದ ಚೈತ್ರಳ ತೂಕ 3,050 ಕೆಜಿ ಮತ್ತು ಲಕ್ಷ್ಮೀ ತೂಕ 2,920 ಕೆಜಿ ಹಾಗೂ ಕಾವೇದಿ ತೂಕ 3,100 ಕೆಜಿ.
ಮಹೇಂದ್ರ ಆನೆಯ ಭಾರ 4,250 ಕೆಜಿ.
ಮೈಸೂರು ನಗರದ ಸಾಯಿರಾಮ್ ತೂಕ ಪರಿಶೀಲನಾ ಕೇಂದ್ರದಲ್ಲಿ ತೂಕ ಲೆಕ್ಕ ಹಾಕಲಾಗಿದೆ.
ದಸರಾ ಆನೆಗಳಿಗೆ ನಾಳೆ, ನಾಡಿದ್ದು ಎರಡು ದಿನ ಆರಮನೆ ಆವರಣದಲ್ಲೇ ಸವಾರಿ ಅಭ್ಯಾಸ ಮಾಡಲಾಗುತ್ತದೆ.
ನಂತರ ಅರಮನೆ (Mysuru Palace)ಯಿಂದ ಬನ್ನಿಮಂಟಪದವರೆಗೆ ತಾಲೀಮು ಶುರುವಾಗಲಿದೆ.
ADVERTISEMENT
ADVERTISEMENT