ADVERTISEMENT
ಚುನಾವಣೆ್ಗಳಲ್ಲಿ ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಭರವಸೆ (Freebies) ಗಂಭೀರ ವಿಷಯ (Serious Issue) ಎಂದು ಸುಪ್ರೀಂಕೋರ್ಟ್ (SupremeCourt) ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ (CJI N V Ramana) ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ರಾಜಕೀಯ ಪಕ್ಷಗಳು (Political Parties) ಉಚಿತ ಭರವಸೆ ನೀಡುವುದಕ್ಕೆ ನಿರ್ಬಂಧ ಹೇರುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಯಾರೂ ಕೂಡಾ ಇದೊಂದು ವಿಷಯ ಎಂದು ಹೇಳುತ್ತಿಲ್ಲ. ಇದು ಗಂಭೀರ ವಿಷಯ. ಯಾರೂ ಉಚಿತಗಳನ್ನು ಪಡೆಯುತ್ತಿದ್ದಾರೋ ಅವರು ಅದನ್ನು ಬಯಸುತ್ತಿದ್ದಾರೆ ಮತ್ತು ನಮ್ಮನ್ನು ಕ್ಷೇಮ ರಾಜ್ಯ. ನಾವು ತೆರಿಗೆ ಪಾವತಿಸುತ್ತಿದ್ದೇವೆ ಮತ್ತು ಅದು ಅಭಿವೃದ್ಧಿ ಕಾರ್ಯಕ್ಕಷ್ಟೇ ಬಳಕೆ ಆಗಬೇಕು ಎಂದು ಕೆಲವರು ಹೇಳಬಹುದು. ಹೀಗಾಗಿ ಇದು ಗಂಭೀರ ವಿಷಯ. ಎರಡೂ ಕಡೆಯವರನ್ನು ಸಮಿತಿ ಆಲಿಸಬೇಕಿದೆ
ಎಂದು ಸಿಜೆಐ ರಮಣ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಬಡತನವಿದೆ ಮತ್ತು ಕೇಂದ್ರ ಸರ್ಕಾರ ಬಡವರ ಹಸಿವು ತಣಿಸಲು ಯೋಜನೆಗಳನ್ನು ಹೊಂದಿದೆ. ಆರ್ಥಿಕತೆಯಲ್ಲಿ ಹಣ ಕಳೆದುಹೋಗ್ತಿದೆ ಮತ್ತು ಜನರ ಕ್ಷೇಮವನ್ನೂ ಸಮತೋಲನ ಮಾಡಬೇಕಿದೆ
ಎಂದೂ ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ವಿಚಾರಣೆ ಆಗಸ್ಟ್ 17ರಂದು ನಡೆಯಲಿದೆ. ಆಗಸ್ಟ್ 26ರಂದು ಈಗಿನ ಸಿಜೆಐ ರಮಣ ಅವರು ನಿವೃತ್ತಿ ಆಗಲಿದ್ದಾರೆ.
ADVERTISEMENT