ಮನೆ ಬಾಡಿಗೆಗೂ ಶೇಕಡಾ 18ರಷ್ಟು ಜಿಎಸ್ಟಿ (GST) ತೆರಿಗೆ ಪಾವತಿಸಬೇಕಾಗುತ್ತದೆ.
ಜುಲೈ 18ರಿಂದ ಬದಲಾಗಿರುವ ಜಿಎಸ್ಟಿ ತೆರಿಗೆ ನಿಯಮಗಳ ಪ್ರಕಾರ ಮನೆ ಬಾಡಿಗೆಗೂ ಈಗ ಜಿಎಸ್ಟಿ ವ್ಯಾಪ್ತಿಗೆ ಬಂದಿದೆ.
ಜುಲೈ 18ರವರೆಗೂ ಬಾಡಿಗೆ (Rent) ಅಥವಾ ಲೀಸ್ (Lease) ನೀಡುವ ವಾಣಿಜ್ಯ ಕಟ್ಟಡಗಳಷ್ಟೇ ಜಿಎಸ್ಟಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸಬೇಕಿತ್ತು.
ಮನೆ ಮಾಲೀಕನ ಬದಲು ಮನೆ ಬಾಡಿಗೆದಾರ (Tenant) ಜಿಎಸ್ಟಿ ಪಾವತಿಸಬೇಕಾಗುತ್ತದೆ. ಆದರೆ ಮನೆ ಮನೆ ಮಾಲೀಕ ಜಿಎಸ್ಟಿ ಪಾವತಿಸುವಂತಿಲ್ಲ.
ಆದರೆ ಜುಲೈ 18ರಿಂದ ಜಾರಿ ಆದ ಹೊಸ ಜಿಎಸ್ಟಿ ನಿಯಮಗಳ ಪ್ರಕಾರ ನೋಂದಣಿ ಆಗಿರುವ ಮನೆ ಬಾಡಿಗೆದಾರರು ಬಾಡಿಗೆ ಮೇಲೆ ಶೇಕಡಾ 18ರಷ್ಟು ಜಿಎಸ್ಟಿ ಪಾವತಿಸುವುದು ಕಡ್ಡಾಯವಾಗಿದೆ.
ಮಾಸಿಕ ವೇತನ ಪಡೆಯುವವರು ಮನೆ ಬಾಡಿಗೆ ಅಥವಾ ಲೀಸ್ಗೆ ಜಿಎಸ್ಟಿ ಪಾವತಿ ಮಾಡಬೇಕಿಲ್ಲ.
ಪಾವತಿ ಮಾಡುವ ಜಿಎಸ್ಟಿಯನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (Input Tax Credit) ಅಡಿ ಕ್ಲೈಮ್ ( ಮಾಡಿಕೊಳ್ಳಲು ಅವಕಾಶವಿದೆ.
ADVERTISEMENT
ADVERTISEMENT