ಹಣದುಬ್ಬರದ (Inflation) ಪರಿಣಾಮ ಈಗಾಗಲೇ ಜನ ಸಾಮಾನ್ಯರ ಬದುಕು ಅಸಹನೀಯವಾಗಿದೆ. ಇದರ ಜೊತೆಗೆ ವಿದ್ಯುತ್ ಆಘಾತ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಿದ್ಧತೆ ನಡೆಸಿದೆ.
ಒಂದು ವೇಳೆ ಹೊಸ ನಿಯಮ ಜಾರಿಯಾದರೆ ಇನ್ಮುಂದೆ ಪ್ರತಿ ತಿಂಗಳು ವಿದ್ಯುತ್ ದರ (Power Tariff) ಪರಿಷ್ಕರಣೆ ಆಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್ ದರಗಳನ್ನು ಹೇಗೆ ಹೆಚ್ಚಿಸಲಾಗುತ್ತದೆಯೋ ಅದೇ ರೀತಿ ವಿದ್ಯುತ್ ದರವನ್ನು ವಿದ್ಯುತ್ ಖರೀದಿ, ಕಲ್ಲಿದ್ದಲು ದರಗಳ ಆಧಾರದ ಮೇಲೆ ಪ್ರತಿ ತಿಂಗಳು ಕರೆಂಟ್ ಬಿಲ್ ಹೆಚ್ಚಿಸುವ ಸಂಭವ ಇದೆ.
ಈ ಸಂಬಂಧ ಕೇಂದ್ರ ಸರ್ಕಾರ ಹೊಸ ನಿಯಮವಳಿ ರೂಪಿಸಿದೆ. ಸದ್ಯ ಜಾರಿಯಲ್ಲಿರುವ ವಿದ್ಯುತ್ ನಿಬಂಧನೆ-2005ಕ್ಕೆ ತಿದ್ದುಪಡಿ ಮಾಡಿ ವಿದ್ಯುತ್ ನಿಬಂಧನೆ -2022ನ್ನು ಕೇಂದ್ರ ಇಂಧನ (Central Govt) ಇಲಾಖೆ ಪ್ರಕಟಿಸಿದೆ.
ಇದನ್ನು ಎಲ್ಲಾ ರಾಜ್ಯ ಸರ್ಕಾರಗಳು, ವಿದ್ಯುತ್ ಸಂಸ್ಥೆಗಳಿಗೆ ಕರಡು ಪ್ರತಿ ಕಳಿಸಿಕೊಟ್ಟಿದೆ. ಆಕ್ಷೇಪಣೆ ಇದ್ದಲ್ಲಿ ಸೆಪ್ಟೆಂಬರ್ 11ರೊಳಗೆ, ಅಕ್ಷಪಣೆ, ಸಲಹೆ ಕಳಿಸಲು ಸೂಚನೆ ನೀಡಿದೆ.
ಜನಸಾಮಾನ್ಯರ ಮೇಲೆಯೇ ಹೊರೆ:
ಹೊಸ ನಿಬಂಧನೆ ಪ್ರಕಾರ ವಿದ್ಯುತ್ ಉತ್ಪಾದನೆಗೆ ಇಂಧನವಾಗಿ ಬಳಸುವ ಕಲ್ಲಿದ್ದಲು, ಗ್ಯಾಸ್ ದರ ಏರಿಕೆ ಆದಲ್ಲಿ ಅದಕ್ಕೆ ಅನುಗುಣವಾಗಿ ವಿದ್ಯುತ್ ದರ ಕೂಡ ಹೆಚ್ಚುತ್ತವೆ. ವಿದ್ಯುತ್ ಖರೀದಿ ಒಪ್ಪಂದಗಳಲ್ಲಿ ಬದಲಾವಣೆ, ಬೇಡಿಕೆಗೆ ಅನುಗುಣವಾಗಿ ಗ್ರಿಡ್ ನಿಂದ ಅಧಿಕ ದರ ನೀಡಿ ಖರೀದಿ ಮಾಡಿದಲ್ಲಿ ಅದರ ಭಾರ ಕೂಡ ಬಳಕೆದಾರನ ಮೇಲೆ ನೇರವಾಗಿ ಹಾಕಲಾಗುತ್ತದೆ.
ವಿದ್ಯುತ್ ನಿಬಂಧನೆ -2022 ಜಾರಿಗೆ ಬಂದ ನಂತರ 90 ದಿನಗಳಲ್ಲಿ ರಾಜ್ಯಗಳ ERC ಗಳು ಇಂಧನ ದರ, ವಿದ್ಯುತ್ ಖರೀದಿ ದರಗಳನ್ನು ಟಾರೀಫ್ ನಲ್ಲಿ ಹೊಂದಾಣಿಕೆ ಮಾಡಲು ಫಾರ್ಮುಲಾ ಪ್ರಕಟಿಸಬೇಕಾಗುತ್ತದೆ.
ವರ್ಷಕ್ಕೊಮ್ಮೆ ಟ್ರುಅಪ್
ಪ್ರತಿ ತಿಂಗಳು ವಿದ್ಯುತ್ ಬಿಲ್ ಗಳಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ERC ಗಳು ಸಮೀಕ್ಷೆ ಮಾಡಬೇಕು. ವಿದ್ಯುತ್ ಖರೀದಿಗಾಗಿ ಮಾಡಲಾದ ವೆಚ್ಚ, ಗ್ರಾಹಕರಿಗೆ ವಿಧಿಸಲಾದ ಟಾರೀಫ್ ಜೊತೆ ಹೋಲಿಕೆ ಮಾಡಿ ಒಂದು ವೇಳೆ ಗ್ರಾಹಕರಿಂದ ಹೆಚ್ಚು ವಸೂಲಿ ಮಾಡಿದ್ದಾರೆ, ಹೆಚ್ಚುವರಿ ಹಣವನ್ನು ವಾಪಾಸ್ ಮಾಡಲಾಗುತ್ತದೆ.
ಒಂದು ವೇಳೆ ಕಡಿಮೆ ವಸೂಲಿ ಮಾಡಿದ್ದಲ್ಲಿ ಉಳಿಕೆ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ. ಇದನ್ನೇ ವಿದ್ಯುತ್ ಪರಿಭಾಷೆಯಲ್ಲಿ ಟ್ರು ಅಪ್ ಎನ್ನಲಾಗುತ್ತದೆ.
ವಿದ್ಯುತ್ ವಲಯದ ಸುಧಾರಣೆಗಾಗಿ ಇತ್ತೀಚಿಗೆ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆ ತಿದ್ದುಪಡಿ ಬಿಲ್ 2022 ನ್ನು ಸಂಸತ್ ನಲ್ಲಿ ಮಂಡಿಸಿತ್ತು. ಆದರೆ, ಇದಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ವಿಧೇಯಕವನ್ನು ಸ್ಟ್ಯಾಂಡಿಂಗ್ ಕಮಿಟಿಗೆ ಪರಿಶೀಲನೆಗೆಂದು ಕಳಿಸಿಕೊಡಲಾಗಿತ್ತು.
ಕೇಂದ್ರ ಸರ್ಕಾರ ಮಂಡಿಸಿದ್ದ ಆ ಮಸೂದೆಯ ಪ್ರಮುಖ ಅಂಶಗಳು ಹೊಸ ವಿದ್ಯುತ್ ನಿಬಂಧನೆಯಲ್ಲಿ ಕಾಣಿಸಿಕೊಂಡಿವೆ.ವಿದ್ಯುತ್ ಕಾಯ್ದೆ ತಿದ್ದುಪಡಿ ಬಿಲ್ 2022 ನ್ನು ಸಂಸತ್ ಅನುಮೋದಿಸುವ ಮೊದಲೇ, ಈ ಮಾರ್ಗದಲ್ಲಿ ಅದನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕೃಷಿ, ಗೃಹ ಮಟ್ಟು ಇತರೆ ಕ್ಯಾಟಗರಿಗಳಲ್ಲಿ ವಿನಿಯೋಗದಾರರಿಗೆ ನೀಡುತ್ತಿರುವ ಉಚಿತ/ ಸಬ್ಸಿಡಿ ವಿದ್ಯುತ್ ಹಣವನ್ನು ಇಷ್ಟು ದಿನ ವಿದ್ಯುತ್ ಸಂಸ್ಥೆಗಳ ಅಂದಾಜಿನ ಮೇರೆಗೆ ಸರ್ಕಾರ ಪಾವತಿ ಮಾಡುತ್ತಿತ್ತು. ಆದರೆ ಉಚಿತಗಳ ಲೆಕ್ಕ ಕೂಡ ಖಚಿತವಾಗಿ ಸಿಗಲಿದೆ.
ADVERTISEMENT
ADVERTISEMENT