# ಆತುರದಲ್ಲಿ ತೆಗೆದುಕೊಂಡ ನಿರ್ಧಾರಗಳು ಯಾವತ್ತಿಗೂ ನಷ್ಟವನ್ನೇ ಉಳಿಸುತ್ತವೆ.
# ಸ್ಟಾಕ್ ಮಾರ್ಕೆಟ್ ನಲ್ಲಿ (stock Market) ಹೂಡಿಕೆ (Investment)ಮಾಡುವ ಮುನ್ನ ಸಾಕಷ್ಟು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.
# ಸಮಂಜಸವಾದ ಮೌಲ್ಯಗಳನ್ನು ನಂಬಿ ಹೂಡಿಕೆ ಮಾಡಬೇಡಿ.
# ಸದ್ಯ ಜನಪ್ರಿಯವಾಗಿರುವ ಕಂಪನಿಗಳ (Company) ಷೇರು (Shares)ಖರೀದಿ ಕಸರತ್ತು ಮಾಡಬೇಡಿ.
# ಮಾರ್ಕೆಟ್ ಗೌರವಿಸಿ.. ಯಾವಾಗ ಷೇರು ಖರೀದಿ ಮಾಡಬೇಕು.. ಯಾವಾಗ ನಷ್ಟವನ್ನು ಅನುಭವಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಜವಾಬ್ದಾರಿಯುತವಾಗಿ ಬೆಳೆಯಬೇಕು.
# ನಷ್ಟ (Loss)ಅನುಭವಿಸಲು ಸಿದ್ಧ ಇರಬೇಕು. ಸ್ಟಾಕ್ ಮಾರ್ಕೆಟ್ ಹೂಡಿಕೆದಾರರ ಜೀವನದಲ್ಲಿ ನಷ್ಟ ಕೂಡ ಒಂದು ಭಾಗವೇ..
# ನಷ್ಟ ಭರಿಸುವ ಶಕ್ತಿ ಇಲ್ಲದೇ ಸ್ಟಾಕ್ ಮಾರ್ಕೆಟ್ ನಲ್ಲಿ ಲಾಭ (Profit)ಕಾಣಲು ಸಾಧ್ಯವಿಲ್ಲ.
# ಸ್ಟಾಕ್ ಮಾರ್ಕೆಟ್ ನಲ್ಲಿ ಷೇರು ಮಾರಾಟ ಆಗುವಾಗ ನಾವು ಖರೀದಿ ಮಾಡಬೇಕು. ಮಾರ್ಕೆಟ್ ನಲ್ಲಿ ಖರೀದಿ ಶುರುವಾದಾಗ ನಾವು ಮಾರಾಟ ಮಾಡಬೇಕು. ಇದೇ ಸ್ಟಾಕ್ ಮಾರ್ಕೆಟ್ ತಂತ್ರ.
# ಪೈಪೋಟಿ ತತ್ವ ಹೊಂದಿರುವ ಮಾಲೀಕರ ಮಾಲೀಕತ್ವದ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು.
# ಮಾರ್ಕೆಟ್ ಮೇಲೆ ವ್ಯಾಮೋಹ ಇಲ್ಲದಿದ್ದರೆ ಎಂದಿಗೂ ಗೆಲುವು ಸಾಧಿಸಲು ಸಾಧ್ಯವಿಲ್ಲ.
# ದಿನದ ವಾಣಿಜ್ಯ ಸುದ್ದಿಗಳ ಆಧಾರದ ಮೇಲೆ ನಿಮ್ಮ ಹೂಡಿಕೆ ನಿರ್ಣಾಯಗಳನ್ನು ಬದಲಾಯಿಸಿಕೊಳ್ಳಬೇಡಿ.
# ಭಯ, ಆತಂಕದಿಂದ ಷೇರು ಮಾರಾಟ ಮಾಡುವುದು ಮಾರ್ಕೆಟ್ ನಲ್ಲಿ ಒಂದು ಕೆಟ್ಟ ಅಭ್ಯಾಸ.
ಈ ಮಂತ್ರಗಳನ್ನು ಚಾಚು ತಪ್ಪದೆ ಪಾಲಿಸಿದಲ್ಲಿ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು.