ಸೈನಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಜಮ್ಮು-ಕಾಶ್ಮೀರದಲ್ಲಿ (Jammu & Kashmir) ನದಿಗೆ ಉರುಳಿಬಿದ್ದಿದೆ. ದುರಂತದಲ್ಲಿ 6 ಸೈನಿಕರು ಹುತಾತ್ಮರಾಗಿದ್ದಾರೆ.
ಈ ಬಸ್ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ಗೆ ಸೇರಿದ 37 ಸೈನಿಕರು ಮತ್ತು ಇಬ್ಬರು ಜಮ್ಮು-ಕಾಶ್ಮೀರ ಪೊಲೀಸರು ಇದ್ದರು.
ಇದನ್ನೂ ಓದಿ : Chanakya Neeti – ಸುಖ ಸಂಸಾರಕ್ಕೆ ನವ ಸೂತ್ರಗಳು
ಈ ಬಸ್ನಲ್ಲಿ ಸೈನಿಕರು ಚಂದವಾರಿಯಿಂದ ಪಾಹಲ್ಗಾಮ್ಗೆ ತೆರಳುತ್ತಿದ್ದರು.
ಈ ವೇಳೆ ಬ್ರೇಕ್ ಫೇಲ್ ಆದ ಕಾರಣ ಬಸ್ ನದಿಗೆ ಉರುಳಿಬಿದ್ದಿದೆ.
ಅನಂತ್ನಾಗ್ ಜಿಲ್ಲೆಯ ಚಂದವಾರಿಯಲ್ಲಿ ನಡೆದಿರುವ ಈ ದುರಂತದಲ್ಲಿ ಗಾಯಗೊಂಡಿರುವ ಉಳಿದ ಸೈನಿಕರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ಏರ್ಲಿಫ್ಟ್ (AirLift) ಮಾಡಲಾಗಿದೆ.