ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ (B S Yediyurappa) ಮಗ ಬಿ ವೈ ವಿಜಯೇಂದ್ರ (B Y Vijayendra) ಅವರು ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ (B L Santosh) ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿ ಬಿ ಎಲ್ ಸಂತೋಷ್ ಅವರನ್ನು ನೇಮಕ ಮಾಡಿರುವ ಬಗ್ಗೆ ಟ್ವೀಟಿಸಿರುವ ವಿಜಯೇಂದ್ರ ಅವರು
ಬಿ ಎಲ್ ಸಂತೋಷ್ ಯಾವತ್ತಿದ್ದರೂ ಅತ್ಯಂತ ದೊಡ್ಡ ನಾಯಕ ಮತ್ತು ಬಿಜೆಪಿಯ ಶಿಲ್ಪಿಗಳಲ್ಲಿ ಒಬ್ಬರು ಎಂದು ಟ್ವೀಟಿಸಿದ್ದಾರೆ.
ಈ ಮೂಲಕ ಬಿ ಎಲ್ ಸಂತೋಷ್ ಅವರ ಬಣದ ಜೊತೆಗೆ ಇಷ್ಟು ದಿನ ಆಂತರಿಕ ಸಂಘರ್ಷದ ಹಾದಿ ತುಳಿದಿದ್ದ ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರೂ ಈಗ ಸಂಘರ್ಷಕ್ಕೆ ತೇಪೆ ಹಚ್ಚುವ ಕೆಲಸ ಆರಂಭಿಸಿದ್ದಾರೆ.
ಬಲಿಷ್ಠ ಪಕ್ಷದ ಬಲಿಷ್ಢ ಬೆನ್ನೆಲುಬು. ಸಂತೋಷ್ಜೀ ಅವರು ಯಾವತ್ತಿದ್ದರೂ ಮತ್ತು ಯಾವತ್ತಿಗೂ ಅತ್ಯಂತ ದೊಡ್ಡ ನಾಯಕ ಮತ್ತು ಬಿಜೆಪಿಯ ಶಿಲ್ಪಿ. ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಅವರು ನೇಮಕ ಆಗಿರುವುದನ್ನು ಕೇಳಿ ನನಗೆ ಹೆಮ್ಮೆ ಮತ್ತು ಖುಷಿ ಆಗುತ್ತಿದೆ. ಅವರಿಗೆ ನನ್ನ ಶುಭಹಾರೈಕೆಗಳು
ವಿಜಯೇಂದ್ರ ಅವರು ಟ್ವೀಟಿಸಿದ್ದಾರೆ.
ಸಂಸದೀಯ ಮಂಡಳಿ (BJP Parliamentary Board) ಮತ್ತು ಕೇಂದ್ರೀಯ ಚುನಾವಣಾ ಸಮಿತಿ (Central Election Committee) ಪುನರ್ರಚನೆ ಬಗ್ಗೆ ಬಿ ಎಲ್ ಸಂತೋಷ್ ಕೂಡಾ ಟ್ವೀಟಿಸಿದ್ದಾರೆ. ನೇಮಕವಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ಎಲ್ಲೂ ಕೂಡಾ ಸಂತೋಷ್ ವಿಶೇಷ ಉಲ್ಲೇಖ ಮಾಡಿಲ್ಲ.
Congratulations to the members of Parliamentary Board & Central Election Committee of @BJP4India . Under their watchful eyes & with their huge experience through their long political journey they are sure to add to value to this largest democratic movement . pic.twitter.com/WVQ8botkuo
— B L Santhosh ( Modi Ka Parivar ) (@blsanthosh) August 17, 2022